ಕೊಲ್ಲೂರು: ಜಡ್ಕಲ್ ಗ್ರಾ. ಪಂ. ವ್ಯಾಪ್ತಿಯ ಮುದೂರು ಗ್ರಾಮ ನಿವಾಸಿ ರೇಣುಕಾ(24) ಅವರು ನಾಪತ್ತೆಯಾದ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement
ಮೇ 17ರಂದು ಪೇಟೆಗೆ ಬಟ್ಟೆ ತರಲೆಂದು ಹೋದವರು ಮನೆಗೆ ಹಿಂತಿರುಗಿ ಬರಲಿಲ್ಲವೆಂದು ದೂರಿನಲ್ಲಿ ತಿಳಿಸಿದ್ದಾರೆ.
5 ಅಡಿ ಎತ್ತರ, ದುಂಡು ಮುಖ, ಬಿಳಿ ಮೈಬಣ್ಣದ ಈಕೆ ಕಪ್ಪು ಬಣ್ಣದ ಹೂಗಳಿರುವ ಚೂಡಿದಾರ ಟಾಪ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.