Advertisement

Extortion Case: ಅರೆಬೆತ್ತಲೆ ವಿಡಿಯೋ ಮಾಡಿ 14 ಲಕ್ಷ ರೂ. ಸುಲಿಗೆ!

11:50 AM Apr 12, 2024 | Team Udayavani |

ಬೆಂಗಳೂರು: ಫೆಡೆಕ್ಸ್‌ ಕೊರಿಯರ್‌ ಕಂಪನಿ ಪ್ರತಿನಿಧಿ ಸೋಗಿನಲ್ಲಿ ವಕೀಲೆಯೊ ಬ್ಬರಿಗೆ ಕರೆ ಮಾಡಿದ ಸೈಬರ್‌ ವಂಚಕರು ಆಕೆಯನ್ನು ಅರೆಬೆತ್ತಲಾಗುವಂತೆ ಹೇಳಿ, ಅದನ್ನು ವಿಡಿಯೋ ಮಾಡಿಕೊಂಡು 14 ಲಕ್ಷ ರೂ. ಸುಲಿಗೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ವಕೀಲೆ ನಗರದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಫೆಡೆಕ್ಸ್‌ ಕೊರಿಯರ್‌ ಕಂಪನಿ ಪ್ರತಿನಿಧಿ ಸೋಗಿನಲ್ಲಿ ಏ.3ರಂದು ಕರೆ ಮಾಡಿದ್ದ ವಂಚಕ, ನಿಮ್ಮ ಹೆಸರಿನಲ್ಲಿ ಹೊರದೇಶಕ್ಕೆ ಕೊರಿಯರ್‌ ಹೊರಟಿದೆ. ಅದರಲ್ಲಿ ಡ್ರಗ್ಸ್‌ ಹಾಗೂ ಇತರೆ ನಿಷೇಧಿತ ವಸ್ತುಗಳಿವೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆದಿದೆ.

ಮುಂಬೈ ಸೈಬರ್‌ ಕ್ರೈಂ ಪೊಲೀಸರ ಜತೆ ಮಾತನಾಡಿ ಎಂದು ಹೇಳಿ ಬೇರೆಯವರಿಗೆ ಕರೆ ವರ್ಗಾಯಿಸಿದ್ದ. ಕೆಲ ಹೊತ್ತಿನ ಬಳಿಕ ಪೊಲೀಸರ ಸೋಗಿನಲ್ಲಿ ಮಾತನಾಡಿದ್ದ ಮತ್ತೂಬ್ಬ ವಂಚಕ, ತಾವು ಹೇಳಿದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸೂಚಿಸಿದ್ದಾನೆ. ನಂತರ ಆ ಆ್ಯಪ್‌ ಮೂಲಕ ವಿಡಿಯೋ ಕರೆ ಮಾಡಿದ ವಂಚಕ, ಪ್ರಕರಣದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದಾರೆ. ಇದರಲ್ಲಿ ನಿಮ್ಮ ಹೆಸರು ಇದೆ. ಇಡೀ ದಿನ ವಿಡಿಯೋ ಕರೆಯಲ್ಲೇ ಇರಬೇಕು ಎಂದು ಹೇಳಿದ್ದ. ಅದನ್ನೂ ನಂಬಿದ್ದ ವಕೀಲೆ, ವಿಡಿಯೋ ಆನ್‌ನಲ್ಲಿ ಇರಿಸಿದ್ದರು ಎಂದು ಹೇಳಲಾಗಿದೆ. ಮತ್ತೂಂದೆಡೆ ಬೇರೆ ನಂಬರ್‌ನಿಂದ ಕರೆ ಮಾಡಿದ ವಂಚಕ, ಪ್ರಕರಣ ಅಂತ್ಯಗೊಳಿಸಲು ಹಣ ಕೇಳಿದ್ದ. ಆದರೆ, ಹಣ ವರ್ಗಾವಣೆ ಆಗಿರಲಿಲ್ಲ. ಪುನಃ ಕರೆ ಮಾಡಿದ್ದ ಆರೋಪಿ, ಮಾದಕ ವಸ್ತು ಸೇವನೆ ಪರೀಕ್ಷೆ ನಡೆಸಬೇಕು. ಬಟ್ಟೆ ಬಿಚ್ಚಿ ಅರೆನಗ್ನವಾಗಿ ನಿಲ್ಲಬೇಕು. ಇಲ್ಲದಿದ್ದರೆ, ನಿಮ್ಮ ಮನೆಗೆ ಬಂದು ಬಂಧಿಸುತ್ತೇವೆ ಎಂದು ಹೆದರಿಸಿದ್ದಾನೆ. ಹೆದರಿದ ವಕೀಲೆ, ಆರೋಪಿ ಹೇಳಿದಂತೆ ಮಾಡಿದ್ದರು. ಅದೇ ವಿಡಿಯೋವನ್ನು ಆರೋಪಿ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ವೆುàಲ್‌ ಮಾಡಿ 14 ಲಕ್ಷ ರೂ. ಸುಲಿಗೆ ಮಾಡಿದ್ದಾನೆ.

ಮತ್ತೂಮ್ಮೆ ಹಣ ಕೇಳಿದಾಗ ವಕೀಲೆ ಬಂದು ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next