Advertisement

ನಾಪತ್ತೆಯಾಗಿದ್ದ ಅಮಾಸೆಬೈಲ್ ಆರ್ ಟಿಐ ಕಾರ್ಯಕರ್ತ ಕುಟುಂಬ ಕೊಪ್ಪದಲ್ಲಿ ಪತ್ತೆ

10:38 AM Dec 21, 2020 | keerthan |

ಸಿದ್ದಾಪುರ: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿ ಅಶೋಕ್ ಶೆಟ್ಟಿಗಾರ್ ಮತ್ತು ಕುಟುಂಬ ಇಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಪತ್ತೆಯಾಗಿದೆ.

Advertisement

ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಕಬ್ಬಿನಾಲೆಯಿಂದ ಆರ್‌ಟಿಐ ಕಾರ್ಯಕರ್ತ ಅಶೋಕ ಶೆಟ್ಟಿಗಾರ್‌ (49) ಹಾಗೂ ಅವರ ಪತ್ನಿ ಶ್ರೀನಿಧಿ (40), ಮಗ ಅಶ್ವಿ‌ನ್‌ (16), ಮಗಳು ಆಶಿಕಾ (14) ಡಿ. 15ರಿಂದ ನಾಪತ್ತೆಯಾಗಿದ್ದರು.

ಇದನ್ನೂ ಓದಿ:ರಾ.ಹೆ ಪ್ರಾಧಿಕಾರದಿಂದ ಅನ್ಯಾಯ ಆರೋಪ: ಮರಣ ಪತ್ರ ಬರೆದಿಟ್ಟು ಶ್ರೀಗಂಧ ಬೆಳೆಗಾರ ನಾಪತ್ತೆ!

ಆರ್‌ಟಿಐ ಕಾರ್ಯಕರ್ತರಾಗಿರುವ ಅಶೋಕ ಶೆಟ್ಟಿಗಾರ್‌ ಅವರ ಮನೆಗೆ ಡಿ. 15ರಿಂದ ಬೀಗ ಹಾಕಿರುವುದರಿಂದ ಅನುಮಾನಗೊಂಡ ಅಳಿಯ ಶಿವಕುಮಾರ್‌ ಅವರು ಪೊಲೀಸರಿಗೆ ದೂರು ನೀಡಿದ್ದರು. ಮಕ್ಕಳಿಬ್ಬರು ಹಾಲಾಡಿಯ ಶಾಲೆಯೊಂದರ ಹೈಸ್ಕೂಲ್‌ ವಿದ್ಯಾರ್ಥಿಗಳಾಗಿದ್ದರು

ಅಶೋಕ ಶೆಟ್ಟಿಗಾರ್ ಕುಟುಂಬ ಕೊಪ್ಪದಲ್ಲಿ ಪತ್ತೆಯಾಗಿದೆ. ಅಮಾಸೆಬೈಲ್ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ತಂಡ ಪತ್ತೆ ಹಚ್ಚಿ ಠಾಣೆಗೆ ಕರೆತಂದಿದ್ದಾರೆ. ನಾಪತ್ತೆ ಪ್ರಕರಣದ ಹಿಂದಿನ ರಹಸ್ಯ ತನಿಖೆಯಿಂದಷ್ಟೇ ಬಯಲಾಗಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next