Advertisement

ಆರ್‌ಬಿಐನಿಂದ ಮಿಸ್ಡ್ ಕಾಲ್‌ ಸಹಾಯವಾಣಿ

07:30 AM Dec 11, 2017 | Harsha Rao |

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಹೆಸರಿನಲ್ಲಿ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಈಗಾಗಲೇ ಎಸ್‌ಎಂಎಸ್‌ ಕ್ಯಾಂಪೇನ್‌ ನಡೆಸುತ್ತಿರುವ ಆರ್‌ಬಿಐ, ಇದೀಗ ಮಿಸ್ಡ್ ಕಾಲ್‌ ಸಹಾಯವಾಣಿಯನ್ನೂ ಆರಂಭಿಸಿದೆ. ಈ ಮೂಲಕ ಜನರಲ್ಲಿ ವಂಚನೆಗೆ ಒಳಗಾಗದಂತೆ ಜಾಗೃತಿ ಮೂಡಿಸುವ ಉದ್ದೇಶವಿದೆ. ಗ್ರಾಹಕರು 8691960000 ದೂರವಾಣಿ ಸಂಖ್ಯೆಗೆ ಮಿಸ್ಡ್ ಕಾಲ್‌ ನೀಡಿದರೆ, ಆರ್‌ಬಿಐ ಪುನಃ ಕರೆ ಮಾಡಿ ವಂಚನೆಯ ವಿವರಗಳ ಬಗ್ಗೆ ಮಾಹಿತಿ ನೀಡಲಿದೆ. ದೂರು ದಾಖಲಿಸುವುದು ಹೇಗೆ ಎಂಬ ವಿವರವನ್ನೂ ಕರೆಯಲ್ಲಿ ನೀಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next