Advertisement
ಆಕೆಗೆ 19 ವರ್ಷ. ಹೇಳಿ ಕೇಳಿ ಅದು ಕನಸು ಕಾಣುವ ವಯಸ್ಸು. ಅವಳಲ್ಲೂ ಬೆಟ್ಟದಷ್ಟು ಕನಸುಗಳಿದ್ದವು. ಬ್ಯಾಚುಲರ್ ಆಫ್ ಫಿಸಿಯೋಥೆರಪಿಯ ಮೊದಲ ವರ್ಷದಲ್ಲಿದ್ದಾಗ ಅವಳ ಕನಸಿನ ಓಟಕ್ಕೆ ಬಲವಾದ ಪೆಟ್ಟು ಬಿತ್ತು. ಡಾಕ್ಟರ್ ಆಗಬೇಕೆಂದಿದ್ದ ಪ್ರಿಯಾ ಭಾರ್ಗವ ರೋಗವೊಂದಕ್ಕೆ ತುತ್ತಾದಳು. Related Articles
Advertisement
ಮಗಳ ಚಿಕಿತ್ಸೆಗಾಗಿ ಅವರ ತಂದೆ ದೆಹಲಿಗೆ ವರ್ಗವಾದರು. ಆಕೆಯ ಕುಟುಂಬ ನೋಯ್ಡಾಕ್ಕೆ ಬಂತು. ಆರ್ಮಿ ಆಸ್ಪತ್ರೆಗೆ ಪ್ರಿಯಾ ಅಡ್ಮಿಟ್ ಆದಳು. ಮೂರು ತಿಂಗಳಲ್ಲಿ ಐದು ಸರ್ಜರಿ! ಪ್ರಿಯಾ ಸೋದರಿ ಒಳ್ಳೆಯ ಸಂಬಳದ ಕೆಲಸ ಬಿಟ್ಟು ಈಕೆಯ ಆರೈಕೆಗೆ ನಿಂತಳು. ಅಮ್ಮ ಕೆಲಸಕ್ಕೆ ಹೋಗಲೇಬೇಕಿತ್ತು. ಪ್ರಿಯಾ ದೈಹಿಕವಾಗಿ ನೋವುಂಡರೆ, ಆಕೆಯ ಕುಟುಂಬ ಮಾನಸಿಕ, ಸಾಮಾಜಿಕ, ಆರ್ಥಿಕ ಯಾತನೆಗೊಳಗಾಯ್ತು.
ಅಕ್ಕನ ಮದುವೆಯ ನಂತರ ಪ್ರಿಯಾ ಒಂಟಿಯಾದಳು. ಏನನ್ನಾದರೂ ಕಲಿಯಬೇಕೆಂಬ ಹಠದಲ್ಲಿ, ಪೇಂಟಿಂಗ್ ಮತ್ತು ಕ್ರಾಫ್ಟ್ವರ್ಕ್‌ಗಳನ್ನು ಯುಟ್ಯೂಬ್ ನೋಡಿಯೇ ಕಲಿತಳು. ಕ್ರಾಫ್ಟ್ ಕ್ಲಾಸ್‌ಗಳನ್ನು ನಡೆಸತೊಡಗಿದಳು. ಓದನ್ನು ಅರ್ಧಕ್ಕೆ ನಿಲ್ಲಿಸಿದ ಕೊರಗಿನ್ನೂ ಹಾಗೇ ಇತ್ತು. ಮುಂದೆ ಇಗ್ನೊ ದೂರಶಿಕ್ಷಣದ ಮೂಲಕ ಬಿ.ಸಿ.ಎ. ಮತ್ತು ಎಂ.ಸಿ.ಎ. ಪದವಿ ಪಡೆದಳು. ಎಂ.ಸಿ.ಎ.ನಲ್ಲಿ ಆಕೆ ನೊಯ್ಡಾ ಇಗ್ನೊà ಸೆಂಟರ್‌ಗೆ ಮೊದಲಿಗಳಾಗಿದ್ದಳು!
ಅಷ್ಟರಲ್ಲಾಗಲೇ “ಮಿಸ್ ವ್ಹೀಲ್‌ಚೇರ್ ಇಂಡಿಯಾ’ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಸಲಹೆ ಬಂದಿತ್ತು. ಓದಿನ ಕಾರಣದಿಂದ ಪ್ರಿಯಾ ಆ ಕಡೆಗೆ ಗಮನ ಹರಿಸಿರಲಿಲ್ಲ. ಕೊನೆಗೆ 2015ರಲ್ಲಿ, ಸ್ಪರ್ಧೆಗೆ 2 ಸಾಧಾರಣ ಫೋಟೊ ಮತ್ತು ಬಯೋಡೆಟಾ ಕಳಿಸಿದ್ದಳು. ಕನ್ನಡಿ ನೋಡುವುದನ್ನೇ ಬಿಟ್ಟಿದ್ದವಳು ಬ್ಯೂಟಿ ಸ್ಪರ್ಧೆ ಗೆಲ್ಲುವುದೇ ಎಂದು ಆಕೆ ಮನಸ್ಸಲ್ಲೇ ನಕ್ಕಿದ್ದಳು. ಆದರೆ, ಇನ್ನಷ್ಟು ಫೋಟೊ ಕಳಿಸಿ ಎಂದು ಕರೆ ಬಂದಾಗ, ಮೊದಲು ಹಿಂಜರಿಕೆಯಾಯ್ತು. ಆಗ ಅವಳ ನೆರವಿಗೆ ಬಂದವರು ಅವಳ ಕ್ರಾಫ್ಟ್ ವಿದ್ಯಾರ್ಥಿಗಳು. ಅವರಿಂದ ಮೇಕಪ್ ಮಾಡಿಸಿಕೊಳ್ಳುತ್ತಿದ್ದವಳು, ನಿಧಾನಕ್ಕೆ ಮೊದಲಿನ ಸೌಂದರ್ಯಪ್ರಜ್ಞೆ ಮೂಡಿಸಿಕೊಂಡಳು.
ಆ ಸ್ಪರ್ಧೆಯ ಕೊನೆಯ ಸುತ್ತಿಗೆ ಆಯ್ಕೆಯಾದ ಏಳು ಜನರಲ್ಲಿ ಪ್ರಿಯಾಳೂ ಇದ್ದಳು. ನಿರೀಕ್ಷೆಯಂತೆ ಆಕೆಯೇ “ಮಿಸ್ ವ್ಹೀಲ್‌ಚೇರ್ ಇಂಡಿಯಾ’ ಗರಿಯನ್ನು ಮುಡಿಗೇರಿಸಿಕೊಂಡಳು. “ನಿಮ್ಮ ಅಂಗವೈಕಲ್ಯ ನಿಮ್ಮನ್ನು ನಿರ್ಧರಿಸುವುದಿಲ್ಲ. ಮಾನಸಿಕ ಸ್ಥೈರ್ಯದಿಂದ ದೈಹಿಕ ನ್ಯೂನತೆಗಳನ್ನು ಮೆಟ್ಟಿ ನಿಲ್ಲುತ್ತೇನೆ ಎನ್ನುವವರಿಗೆ ಯಾವ ಪರ್ವತವೂ ಹತ್ತಲಾರದ್ದಲ್ಲ’ ಎನ್ನುತ್ತಾರೆ ಪ್ರಿಯಾ ಭಾರ್ಗವ.
ಸೌಂದರ್ಯ ಸ್ಪರ್ಧೆಗೆಂದು ಆಕೆ ಯಾವ ಟ್ರೇನಿಂಗ್ ಪಡೆದಿಲ್ಲ. ನಗುಮೊಗದ ಆಕೆಗೆ ಆತ್ಮವಿಶ್ವಾಸವೇ ಶ್ರೀರಕ್ಷೆ. ಹಾnಂ, ಮುಂದಿನ ತಿಂಗಳು ಪೋಲೆಂಡ್‌ನಲ್ಲಿ ನಡೆಯುವ “ಮಿಸ್ ವ್ಹೀಲ್‌ಚೇರ್ ವರ್ಲ್ಡ್’ ಸ್ಪರ್ಧೆಯಲ್ಲಿ ಪ್ರಿಯಾ ಭಾಗವಹಿಸಲಿದ್ದಾಳೆ. ಯಶಸ್ಸು ಆಕೆಯದ್ದೇ ಆಗಲಿ ಎಂದು ಹಾರೈಸೋಣ.
ಬಾತ್‌ರೂಮ್‌ನಲ್ಲಿ ಮರದ ತುಂಡಿನಂತೆ ಬಿದ್ದಿದ್ದೆ..!“ನಾನೆಂಥ ದಯನೀಯ ಸ್ಥಿತಿ ತಲುಪಿದ್ದೇ ಗೊತ್ತಾ? ಒಂದು ದಿನ ವಾಶ್‌ರೂಮ್‌ಗೆ ಹೋದವಳಿಗೆ ವಾಪಸ್ ಬರಲಾಗಲಿಲ್ಲ. ಅಲ್ಲೇ ಮೂರು ಗಂಟೆ ಇದ್ದೆ. ತುಂಬಾ ಚಳಿ ಬೇರೆ ಆಗುತ್ತಿತ್ತು. ಅಮ್ಮ ಮನೆಗೆ ವಾಪಸ್ ಬಂದಾಗ ನಾನ್ ಬಾತ್‌ರೂಮಿನೊಳಗೆ ಮರದ ತುಂಡಿನಂತೆ ಬಿದ್ದುಕೊಂಡಿದ್ದೆ! ತಕ್ಷಣ ನನ್ನನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಲ್ಲಿನ ಡಾಕ್ಟರ್ಗಳೂ ನನಗೆ ಸರಿಯಾಗಿ ಚಿಕಿತ್ಸೆ ಕೊಡದೆ ನಿರ್ಲಕ್ಷಿಸಿದರು. ಬರುಬರುತ್ತಾ ಡಿಪ್ರಶನ್ ಮತ್ತು ಸ್ಕಿಝೋಫ್ರೆàನಿಯಾದ ಲಕ್ಷಣಗಳೂ ಜೊತೆಯಾಯ್ತು. ಅಪ್ಪ- ಅಮ್ಮನನ್ನೂ ಗುರುತಿಸದ ಸ್ಥಿತಿ ತಲುಪಿದ್ದೆ. ಊಟ ಕೂಡ ಮಾಡುತ್ತಿರಲಿಲ್ಲ. ಯಾರಾದರೂ ತಿನ್ನುವ ಅನ್ನಕ್ಕೆ ವಿಷ ಹಾಕುತ್ತಾರೆಂಬ ಹುಚ್ಚು ಭಯ ಕಾಡುತ್ತಿತ್ತು’ ಎಂದು ಹಳೆಯ ದಿನಗಳನ್ನು ನೆನೆಸಿಕೊಳ್ಳುತ್ತಾರೆ ಪ್ರಿಯಾ. ಪ್ರಿಯಾಂಕಾ