ಲಂಡನ್: 2019 ರಲ್ಲಿ ಮಿಸ್ ಇಂಗ್ಲೆಂಡ್ ಕಿರೀಟವನ್ನು ಪಡೆದ ಸೌಂದರ್ಯ ರಾಣಿ ಜಗತ್ತಿಗೆ
ಕೋವಿಡ್-19 ರ ಸಂದರ್ಭದಲ್ಲಿ ವೈದ್ಯರಾಗಿ ವೃತ್ತಿಜೀವನ ಆರಂಭಿಸಲು ನಿರ್ಧರಿಸಿದ್ದಾರೆ.
ಭಾಷಾ ಮುಖರ್ಜಿ ಅವರು ಡಿಸೆಂಬರ್2019ರಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯ ಸಮಯದಲ್ಲಿ ಕಿರಿಯ ವೈದ್ಯರಾಗಿ ವೃತ್ತಿಜೀವನದಲ್ಲಿದ್ದರು. ಮಿಸ್ ಇಂಗ್ಲೆಂಡ್ ಗೆದ್ದ ಅನಂತರ ಮುಖರ್ಜಿ ವೃತ್ತಿ ಜೀವನದಿಂದ ನಿವೃತ್ತಿ ಪಡೆದಿದ್ದರು.
ಆದರೆ
ಕೋವಿಡ್-19 ಸೋಂಕಿನಿಂದ ಇಂಗ್ಲೆಂಡಿನಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದು, ವೈದ್ಯರ ಸೇವೆ ಅಗತ್ಯವಿದೆ. ಹಾಗಾಗಿ ಮುಖರ್ಜಿ ತನ್ನ ಹಳೆಯ ಆಸ್ಪತ್ರೆಯಲ್ಲೇ ಮಾಜಿ ಸಹೋದ್ಯೋಗಿಗಳ ಜತೆ ಕರ್ತವ್ಯ ನಿರತರಾಗಿದ್ದಾರೆ.
ಮಿಸ್ ಇಂಗ್ಲೆಂಡ್ ಆಗಿದ್ದ ನನಗೆ ಇಂಗ್ಲೆಂಡ್ ನ ಸೇವೆ ಮಾಡಲು ಇದಕ್ಕಿಂತ ದೊಡ್ಡ ಅವಕಾಶ ಮತ್ತೂಂದಿಲ್ಲ. ಹಾಗಾಗಿ ಈ ಮಾನವೀಯ ಕೆಲಸಕ್ಕೂ ಮಿಸ್ ಇಂಗ್ಲೆಂಡ್ ಕಿರೀಟಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಫ್ರಿಕಾ, ಟರ್ಕಿ, ಭಾರತ, ಪಾಕಿಸ್ಥಾನ ಮತ್ತು ಹಲವು ರಾಷ್ಟ್ರಗಳಿಂದ ದತ್ತಿ ಸಂಸ್ಥೆಗಳಿಗೆ ರಾಯಭಾರಿಯಾಗಿ ಆಹ್ವಾನಿಸಲಾಗಿತ್ತು. ಮಾರ್ಚ್‌ನಲ್ಲಿ ಕೋವೆಂಟ್ರಿ ಮರ್ಸಿಯಾ ಲಯನ್ಸ್ ಕ್ಲಬ್ ಪರವಾಗಿ ನಾಲ್ಕು ವಾರಗಳ ಕಾಲ ಭಾಷಾ ಭಾರತದಲ್ಲಿದ್ದರು.
ಅಭಿವೃದ್ಧಿ ಮತ್ತು ಸಮುದಾಯದ ರಾಯಭಾರಿಯಾಗಿ ಶಾಲೆ ಬಿಟ್ಟ ಹುಡುಗಿಯರ ಮನೆಗೆ ಆರ್ಥಿಕ ಸಹಾಯವನ್ನೂ ಮಾಡಿದ್ದರು.