Advertisement

ಮಿಸ್‌ ಬೂಟ್‌ಫುಲ್!‌

05:07 AM May 27, 2020 | Lakshmi GovindaRaj |

ಲಾಕ್‌ಡೌನ್‌ ನಿಯಮ ಗಳು ಸಡಿಲವಾಗಿ, ಜನ ಹೊರಗಡೆ ಹೋಗಲು ಶುರುಮಾಡಿದ್ದಾರೆ.  ಕಪಾಟಿನ ಒಳಗಿಟ್ಟ ಬಟ್ಟೆ-ಬರೆ, ಪಾದರಕ್ಷೆ, ಬ್ಯಾಗ್‌ ಮುಂತಾದವನ್ನು ಹೊರಗೆ  ತೆಗೆಯುವ ಸಮಯ ಬಂದಿದೆ.  ಬೇಸಿಗೆಯ ಝಳವೂ ಹೆಚ್ಚಿರುವುದರಿಂದ, ಕಾಲಕ್ಕೆ ತಕ್ಕಂತೆ ಉಡುಪು, ಪಾದರಕ್ಷೆ ಧರಿಸಬೇಕಿದೆ. ಬೇಸಿಗೆಕಾಲದಲ್ಲಿ ಬೂಟು, ಸಾಕ್ಸು ಧರಿಸಿ ಓಡಾಡಲು ಕಿರಿಕಿರಿ ಆಗುತ್ತದೆ. ಆದರೆ, ಅದೆಷ್ಟೋ ಕಚೇರಿಗಳಲ್ಲಿ, ಸಮವಸ್ತ್ರದ ಜೊತೆಗೆ ಬೂಟು ಧರಿಸಬೇಕು ಎಂಬ  ನಿಯಮವಿರುತ್ತದೆ. ಹಾಗಿದ್ದಾಗ, ಅತ್ತ ಚಪ್ಪಲಿಯೂ ಅಲ್ಲದ, ಇತ್ತ ಬೂಟ್‌ ಕೂಡ ಅಲ್ಲದ ಸಮ್ಮರ್‌ ಶೂಸ್‌ ತೊಡಬಹುದು! ಶೂ ಎಂದಾಕ್ಷಣ, ಗಂಡಸರು ತೊಡುವ ದೊಡ್ಡ ಬೂಟ್ಸ… ಅಂತ ತಿಳಿಯಬೇಡಿ. ಹೆಣ್ಣು ಮಕ್ಕಳ ಪಾದಗಳ  ಅಂದ ಹೆಚ್ಚಿಸುವ ಸುಂದರ ಸಮ್ಮರ್‌ ಶೂಸ್‌ಗಳಿವು.

Advertisement

ಬೆವರುವ ಪಾದಗಳಿಗೆ…: ಚಪ್ಪಲಿ, ಪ್ಲಿಪ್‌ ಫ್ಲಾಪ್ಸ್, ಸ್ಯಾಂಡಲ್ಸ್‌ ಅಥವಾ  ಗ್ಲಾಡಿಯೇಟಸ್‌ ತೊಡುವು ದರ ಬದಲು ಈಗ ಸಮ್ಮರ್‌ ಶೂಸ್‌ ತೊಡಬಹುದು. ಬ್ಯಾಲರೀನಾ ಶೂಸ್‌, ಸ್ಲಿಪ್‌-ಆನ್ಸ್, ಓಪನ್‌ ಶೂಸ್‌, ಮುಂತಾದ ಪಾದರಕ್ಷೆಗಳನ್ನು ತೊಟ್ಟಾಗ, ಪಾದಗಳು ಬೆವರಿ ಹಿಂಸೆಯಾಗುತ್ತದೆ. ಆಗ, ಈ ಸಮ್ಮರ್‌ ಶೂಗಳು ನೆರವಿಗೆ ಬರುತ್ತವೆ. ಇದಕ್ಕೂ, ಇತರ ಶೂಗಳಿಗೂ ಏನು ವ್ಯತ್ಯಾಸ   ಗೊತ್ತಾ? ಈ ಪಾದರಕ್ಷೆ,ಪಾದವನ್ನು ಸಂಪೂರ್ಣವಾಗಿ  ಕವರ್‌ ಮಾಡುವುದಿಲ್ಲ.ಬದಲಾಗಿ,  ಕೇವಲ ಪಾದದ ನಡು ಮತ್ತು ಹಿಮ್ಮಡಿಯನ್ನು ಮುಚ್ಚುತ್ತದೆ. ಆದ್ದರಿಂದ, ಇದನ್ನು ಸಾಕ್ಸ್‌ ಜೊತೆ ಧರಿಸುವಂತಿಲ್ಲ! ಧರಿಸಿದರೆ, ಬೆವರಿನಿಂದ ಶೂ ದುರ್ವಾಸನೆ ಬೀರುತ್ತದೆ. ದುರ್ವಾಸನೆಯೂ ಬರಬಾರದು, ಪಾದಗಳಿಗೆ ಸಂಕಟವೂ  ಆಗಬಾರದು. ರಕ್ಷಣೆಯೂ ಬೇಕು, ಸ್ಟೈಲೂ ಬೇಕು ಎಂಬ ಎಲ್ಲಾ ರೀತಿಯ ಬೇಡಿಕೆಗಳಿಗೂ ಉತ್ತರ, ಈ ಸಮ್ಮರ್‌ ಶೂಸ್‌.

ಎಲ್ಲದಕ್ಕೂ ಸೈ: ಕಾಲಗಂಟಿನವರೆಗೆ ಇರುವ ಸಮ್ಮರ್‌ ಶೂಗಳನ್ನೂ ಸೀರೆ, ಚೂಡಿದಾರ್‌, ಲಂಗ, ಪ್ಯಾಂಟ, ಶಾರ್ಟ್‌ ಡ್ರೆಸ್ಸಸ್‌… ಹೀಗೆ ಎಲ್ಲದರ ಜೊತೆ ಧರಿಸಬಹುದು. ಪಾಶ್ಚಾತ್ಯ ಮತ್ತು ಸಾಂಪ್ರದಾಯಿಕ ಎರಡೂ ಬಗೆಯ ಉಡುಗೆಗಳ  ಜೊತೆ ಚೆನ್ನಾಗಿ ಕಾಣುವ ಪಾದರಕ್ಷೆ ಇದು.

ಹೈ ಹೀಲ್ಸ್‌ ಆಯ್ಕೆಯೂ ಇದೆ: ಸಮ್ಮರ್‌ ಶೂಸ್‌ಗಳಲ್ಲಿ ಹೈ ಹೀಲ್ಡ ಆಯ್ಕೆಗಳೂ ಇವೆ. ಲೆದರ್‌, ಫೇಕ್‌ ಲೆದರ್‌, ರಬ್ಬರ್‌, ಪ್ಲಾಸ್ಟಿಕ್‌, ಬಟ್ಟೆ ಮುಂತಾದ ವಸ್ತುಗಳಿಂದ ಮಾಡಲ್ಪಟ್ಟ ಮಣಿ, ಮುತ್ತು, ಗೆಜ್ಜೆ, ಟ್ಯಾಝೆಲ, ಚೈನ್‌, ಬಕಲ, ಹುಕ್‌,  ವೆಲೊ, ಲೇಸ್‌ ವರ್ಕರ್‌, ಸ್ಟ್ರಾ ಮತ್ತು ದಾರಗಳು, ಕಸೂತಿ, ಮಿರರ್‌ ವರ್ಕ್‌ ಮತ್ತು ವಿಭಿನ್ನ ಬಣ್ಣ, ವಿನ್ಯಾಸಗಳಿಂದ ಅಲಂಕರಿಸಲ್ಪಟ್ಟ ಶೂಗಳು ಮಾರುಕಟ್ಟೆಯಲ್ಲಿವೆ. ಈ ಬೇಸಿಗೆ ಕಾಲದಲ್ಲಿ, ಪಾದಗಳ ರಕ್ಷಣೆ ಮತ್ತು ಆರಾಮದ ಜೊತೆಗೆ,  ಸ್ಟೈಲಿಷ್‌ ಆಗಿ ಕಾಣಿಸಲು ಈ ಪಾದರಕ್ಷೆಗಳನ್ನು ಧರಿಸಿ. ಆದರೆ ನೆನಪಿಡಿ, ಹೊರಗಿನಿಂದ ಮನೆಯೊಳಗೆ ಬರುವಾಗ, ಕೈ- ಕಾಲು  ಗಳನ್ನು ಚೆನ್ನಾಗಿ ಸಾಬೂನಿನಿಂದ ತೊಳೆ ಯಿರಿ ಮತ್ತು ಪಾದರಕ್ಷೆಗಳನ್ನೂ ಸ್ವತ್ಛಗೊ ಳಿಸಿ. ತೊಳೆಯಲು  ಸಾಧ್ಯವಿಲ್ಲದ ಸಮ್ಮರ್‌ ಶೂಸ್‌ ಮೇಲೆ, ಸ್ಯಾನಿಟೈಝರ್‌ ಅಥವಾ ಡಿಸ್‌ಇನೆ#ಕ್ಟಂಟ್‌ ಸಿಂಪಡಿಸಿ. ಏಕೆಂದರೆ, ಲಾಕ್‌ಡೌನ್‌ ಸಡಿಲವಾ ದರೂ, ಕೊರೊನಾ ಹರಡುವಿಕೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ!

* ಅದಿತಿಮಾನಸ

Advertisement
Advertisement

Udayavani is now on Telegram. Click here to join our channel and stay updated with the latest news.

Next