ಕಾಪು : ಕಾಪು ಪುರಸಭೆ ವ್ಯಾಪ್ತಿಯ ಉಳಿಯಾರಗೋಳಿ ಯಾರ್ಡ್ ಬೀಚ್‌ನಲ್ಲಿ ಸರಕಾರ ಮತ್ತು ದಾನಿಗಳ ನೆರವಿನೊಂದಿಗೆ ಅಳವಡಿಸಲಾದ ವಿಶ್ರಾಂತಿ ಬೆಂಚ್‌ಗಳ ಸಹಿತ ವಿವಿಧ ಸೊತ್ತುಗಳನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಬೀಚ್‌ಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಪುರಸಭೆ ವತಿಯಿಂದ ಸೂಚನಾ ಫಲಕ, ಯಾರ್ಡ್ ಫ್ರೆಂಡ್ಸ್ ನೇತೃತ್ವದಲ್ಲಿ ಸಿಮೆಂಟ್ ಬ್ಲಾಕ್‌ನಿಂದ ನಿರ್ಮಿಸಿರುವ ತಡೆಗೋಡೆ, ಸಿಮೆಂಟ್ ಬೆಂಚ್‌ಗಳನ್ನು ಧ್ವಂಸಗೊಳಿಸಲಾಗಿದೆ. ಜತೆಗೆ ಕಸದ ತೊಟ್ಟಿಯಲ್ಲಿದ್ದ ತ್ಯಾಜ್ಯ ಗಳನ್ನು ಎಲ್ಲೆಂದರಲ್ಲಿ ಎಸೆದು ಅಮಾನವೀಯವಾಗಿ ವರ್ತಿಸಿದ್ದಾರೆ.
ಈ ಕೃತ್ಯದಿಂದ ಸಾವಿರಾರು ರೂ. ಹಾನಿಯುಂಟಾಗಿದೆ. ಕಾಪು ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಿಡಿಗೇಡಿಗಳನ್ನು ಶೀಘ್ರ ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ.
ದಾನಿಗಳು, ಸ್ಥಳೀಯರು, ಸರಕಾರ ಮತ್ತಿತರ ಮೂಲಗಳ ಅನುದಾನದಿಂದ ಇದನ್ನು ಅಭಿವೃದ್ಧಿಪಡಿಸಲಾಗಿತ್ತು.
ಮಾ.13ರಂದು ನಡೆದ ಘಟನೆ ಖಂಡನೀಯವಾಗಿದ್ದು ಪೊಲೀಸ್ ಬೀಟ್ ನಡೆಸುವಂತೆ ಒತ್ತಾಯಿಸಿದ್ದೇವೆ ಎಂದು ಯಾರ್ಡ್ ಫ್ರೆಂಡ್ಸ್ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಹೇಳಿದ್ದಾರೆ.