Advertisement

ಪಾಕ್‌ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಹುದ್ದೆ ತ್ಯಜಿಸಿದ ಮಿಸ್ಬಾ ಉಲ್‌ ಹಕ್‌

01:05 PM Oct 15, 2020 | keerthan |

ಕರಾಚಿ: ಪಾಕಿಸ್ಥಾನ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಮತ್ತು ಆಯ್ಕೆಗಾರನಾಗಿರುವ ಮಿಸ್ಬಾ ಉಲ್‌ ಹಕ್‌ ಅವರು ಇದೀಗ ಮುಖ್ಯ ಆಯ್ಕೆಗಾರ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.

Advertisement

ರಾಷ್ಟ್ರೀಯ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಪಾತ್ರಕ್ಕೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ಮಿಸ್ಬಾ ಈ ನಿರ್ಧಾರಕ್ಕೆ ಬಂದಿದ್ದಾರೆ.

ನ. 30ಕ್ಕೆ ಮುಖ್ಯ ಆಯ್ಕೆಗಾರ ಹುದ್ದೆಯಿಂದ ಕೆಳಗಿಳಿಯವುದಾಗಿ ಮಿಸ್ಬಾ ಅವರು ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ)ಗೆ ಮಾಹಿತಿ ನೀಡಿದ್ದಾರೆ ಎಂದು ಮಿಸ್ಬಾ ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಪಂಜಾಬ್‌ ಬಲ ಹೆಚ್ಚಿಸಿದ ಗೇಲ್‌ ಆಗಮನ

ಕಳೆದ ವರ್ಷದ ಸಪ್ಟೆಂಬರ್ ನಲ್ಲಿ ಮಿಸ್ಬಾ ಹಕ್ ಅವರು ಮುಖ್ಯ ಕೋಚ್ ಮತ್ತು ಮುಖ್ಯ ಆಯ್ಕೆಗಾರನಾಗಿ ಆಯ್ಕೆಯಾಗಿದ್ದರು. ಮೂರು ವರ್ಷದ ಅವಧಿಯ ಒಪ್ಪಂದ ಮಾಡಲಾಗಿತ್ತು.

Advertisement

ಮಿಸ್ಬಾ ಕೋಚಿಂಗ್ ಅವಧಿಯಲ್ಲಿ ಪಾಕ್ ತಂಡ ನಿರಾಶಾದಾಯಕ ಪ್ರದರ್ಶನ ನೀಡಿದೆ. ಶ್ರೀಲಂಕಾ ವಿರುದ್ಧ ಎರಡು ಏಕದಿನ ಪಂದ್ಯಗಳನ್ನು ಗೆದ್ದ ತಂಡ ನಂತರ ಟಿ20 ಸರಣಿಯಲ್ಲಿ ಸೋಲನುಭವಿಸಿತ್ತು. ನಂತರ ಆಸೀಸ್ ವಿರುದ್ಧದ ಟಿ20 ಮತ್ತು ಟೆಸ್ಟ್ ಸರಣಿಯಲ್ಲಿ ಒಂದೂ ಪಂದ್ಯವನ್ನು ಗೆಲ್ಲಲು ಪಾಕ್ ವಿಫಲವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next