ಮುಂಬಯಿ: ಮೀರಾ ರೋಡ್ ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯಲ್ಲಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ಶ್ರೀ ಗಣಪತಿಯ ಮೂರ್ತಿ ಪ್ರತಿಷ್ಠಾಪ ನೆಯು ಸೆ. 13 ರಂದು ಮಠದ ಆವರಣದಲ್ಲಿ ವಿವಿಧ ಪೂಜಾ ಕೈಂಕ ರ್ಯಗಳೊಂದಿಗೆ ಜರಗಿತು.
ಬೆಳಗ್ಗೆ ಮಠದ ಪ್ರಬಂಧಕ ರಾಧಾ ಕೃಷ್ಣ ಭಟ್, ಜಯರಾಮ್ ಭಟ್ ಮತ್ತು ಗೋಪಾಲ್ ಭಟ್ ಅವರ ಪೌರೋಹಿತ್ಯ ದೊಂದಿಗೆ ಶ್ರೀ ಗಣೇಶನ ಮೂರ್ತಿ ಪ್ರತಿಷ್ಠೆ, 108 ತೆಂಗಿನಕಾಯಿ ಶ್ರೀ ಗಣೇಶ ಮಹಾಯಜ್ಞ, ಪೂರ್ಣಾಹುತಿ, ಮಹಾ ಪೂಜೆ, ಸಂಜೆ ಸರ್ವ ಭಕ್ತರಿಂದ ದಾಸರ ಭಜನೆ, ರಾತ್ರಿ ರಂಗಪೂಜೆ ಮತ್ತು ಮಹಾಪ್ರಸಾದ ವಿತರಣೆ ಜರಗಿತು.
ಮಠದ ಟ್ರಸ್ಟಿ ಸಚ್ಚಿದಾನಂದ ರಾವ್ ಅವರು ಉತ್ಸವದ ಧಾರ್ಮಿಕ ಕಾರ್ಯಕಲಾಪಗಳ ಬಗ್ಗೆ ತಿಳಿಸಿ ಐದು ದಿನಗಳ ಕಾಲ ನಡೆಯುವ ಶ್ರೀ ಗಣಪತಿಯ ಆರಾಧನೆಯು ಸೆ. 17 ರಂದು ವಿಸರ್ಜನೆಯ ಶೋಭಾ ಯಾತ್ರೆಯೊಂದಿಗೆ ಕೊನೆಗೊಳ್ಳಲಿದೆ. ಈ ಸಂದರ್ಭದಲ್ಲಿ ವಿವಿಧ ಪೂಜೆಗಳು, ಪ್ರತೀ ದಿನದ ಸಂಜೆ 5 ರಿಂದ ರಾತ್ರಿ 8 ರವರೆಗೆ ಸರ್ವ ಭಕ್ತರಿಂದ ದಾಸರ ಭಜನೆಯನ್ನು ಆಯೋಜಿಸಲಾಗಿದೆ. ಉಡುಪಿಯ ಶ್ರೀ ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ಇಚ್ಛೆ ಹಾಗೂ ಮಾರ್ಗದರ್ಶನದಂತೆ ಪ್ರತೀ ದಿನವೂ ಭಜನೆಯನ್ನು ಆಯೋಜಿಸಲಾಗಿದೆ.
ಇದರಲ್ಲಿ ಭಾಗವಹಿಸುವ ಭಜನ ತಂಡಗಳು, ಸಂಘ-ಸಂಸ್ಥೆಗಳು, ಸಮು ದಾಯ ಸಂಘಟನೆಗಳು ಮುಂಚಿತ ಞವಾಗಿ ಹೆಸರು ನೋಂದಾಯಿಸಿ ಸೇವೆ ಸಲ್ಲಿಸಬಹುದು. ಪ್ರತೀ ವಾರ ನಡೆಯುವ ಯೋಗ ಮತ್ತು ಕರಾಟೆ ತರಬೇತಿ ಶಿಬಿರದಲ್ಲೂ ಮುಕ್ತವಾಗಿ ಎಲ್ಲರು ಪಾಲ್ಗೊಳ್ಳಬಹುದು ಎಂದರು.
ಚಿತ್ರ-ವರದಿ : ರಮೇಶ್ ಅಮೀನ್