Advertisement

ಮಿರಾಜ್‌ ದುರಂತವು ದೇಶೀಯ ತಯಾರಿಕೆಗೆ ಹಿನ್ನಡೆಯಲ್ಲ: ನಿರ್ಮಲಾ

12:30 AM Feb 04, 2019 | |

ಕೊಯಮತ್ತೂರು: “ಬೆಂಗ ಳೂರಿನಲ್ಲಿ ಇತ್ತೀಚೆಗೆ ನಡೆದ ಮಿರಾಜ್‌-2000 ಜೆಟ್‌ ದುರಂತವು ದೇಶೀಯ ವಿಮಾನ ತಯಾರಿಕೆಗಾದ ಹಿನ್ನಡೆ ಅಲ್ಲ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅಭಿಪ್ರಾಯಪಟ್ಟಿದ್ದಾರೆ. 

Advertisement

ಕೊಯಮತ್ತೂರಿನಲ್ಲಿ ಭಾನುವಾರ ಮಾತನಾಡಿದ ಅವರು, ದೇಶೀಯವಾಗಿ ವಿಮಾನ ತಯಾರಿಕೆಗೆ ಈ ದುರಂತದಿಂದ ಯಾವುದೇ ಹಿನ್ನಡೆಯಾಗಿಲ್ಲ. ಆದರೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಇನ್ನಷ್ಟು ಸುಧಾರಣೆ ಆಗಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ಎಚ್‌ಎಎಲ್‌ ಸಂಸ್ಥೆಯು ಮೇಲ್ದರ್ಜೆಗೇರಿಸಿದ್ದ ತರಬೇತಿ ವಿಮಾನವು ಪತನಗೊಂಡು ಇಬ್ಬರು ಪೈಲಟ್‌ಗಳು ಸಾವಿಗೀಡಾದ ಬೆನ್ನಲ್ಲೇ ಸಚಿವೆಯಿಂದ ಈ ಹೇಳಿಕೆ ಹೊರಬಿದ್ದಿದೆ. ಇದೇ ವೇಳೆ, ಹಿಂದಿನ ಯುಪಿಎ ಸರಕಾರದ ವಿರುದ್ಧ ಹರಿಹಾಯ್ದ ನಿರ್ಮಲಾ, 10 ವರ್ಷಗಳ ಆಡಳಿತಾವಧಿಯಲ್ಲಿ ಯುಪಿಎ ಸರಕಾರವು ಎಚ್‌ಎಎಲ್‌ ಆಗಲೀ, ಬಿಇಎಲ್‌ ಆಗಲೀ, ಯಾವುದೇ ರಕ್ಷಣಾ ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಅವರು ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದರೆ ಈಗ ಪಿಎಸ್‌ಯುಗಳು ವಿಶ್ವ ದರ್ಜೆಗೇರುತ್ತಿದ್ದವು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next