Advertisement

ಹೆಬ್ರಿ: ಶಿವಪುರ ಕೊರಗಜ್ಜನ ಕ್ಷೇತ್ರದಲ್ಲಿ ನೆಲದಲ್ಲಿ ಮೂಡಿಬರುತ್ತಿರುವ ನಾಗರ ಹಾವಿನ  ಚಿತ್ರ

02:55 PM Apr 27, 2022 | Team Udayavani |

ಹೆಬ್ರಿ: ಹಲವಾರು ಪವಾಡಗಳ ಮೂಲಕ ಪ್ರಸಿದ್ದಿಯನ್ನು ಪಡೆದ ಶಿವಪುರ ಕೊರಗಜ್ಜನ ಕ್ಷೇತ್ರದಲ್ಲಿ ಬುಧವಾರ ಬೆಳಿಗ್ಗೆ ಸನ್ನಿಧಾನದ ಸಮೀಪ ನೆಲದಲ್ಲಿ ಮೂಡಿಬರುತ್ತಿರುವ ನಾಗರ ಹಾವಿನ ಚಿತ್ರ ಅಚ್ಚರಿ ಮೂಡಿಸುತ್ತಿದೆ.

Advertisement

ತೆಂಗಿನ ಮರದ ಸಮೀಪ ಕೃಷ್ಣ ಸರ್ಪದ ರೂಪವನ್ನು ಹೋಲುವ ನಾಗರ ಹಾವಿನ ಚಿತ್ರ ಹುತ್ತದ ಮಣ್ಣಿನ ಹಾಗೆ ಇರುವ ಮಣ್ಣಿನಿಂದ ಇರುವೆಗಳು ನಿರ್ಮಿಸುತ್ತಿರುವುದು ನೋಡುಗರನ್ನು ಬೆರಗುಗೊಳಿಸಿದೆ.

ಸುತ್ತಮುತ್ತ ಹುತ್ತದ ಮಣ್ಣು ಇಲ್ಲದೆ ಆ ಜಾಗದಲ್ಲಿ ಇರುವೆಗಳು ಮಣ್ಣನ್ನು ಎಲ್ಲಿಂದ ತರುತ್ತಿವೆ ಎಂಬ ಅಚ್ಚರಿ ಎದುರಾಗಿದ್ದು ನಾಗರ ಹಾವಿನ ಚಿತ್ರ ಮಣ್ಣಿನಿಂದ ಉಬ್ಬುತ್ತಲೆ ಇದ್ದು ಸಾರ್ವಜನಿಕರು ಈ ಅಚ್ಚರಿ ನೋಡಲು ಬರುತ್ತಿದ್ದಾರೆ.

ಕ್ಷೇತ್ರದ ಧರ್ಮದರ್ಶಿ ಪುನೀತ್ ಅವರಿಗೆ ಮುಂಜಾನೆ ಸುಮಾರು 4 ಗಂಟೆ ಹೊತ್ತಿಗೆ ನಾಗರ ಹಾವೊಂದು ಪರಿಸರದಲ್ಲಿ ಆತ್ತಿತ್ತ ಓಡಾಡುತ್ತಿರುವ ಕನಸು ಬಿದ್ದಿದೆ. ಬೆಳಿಗ್ಗೆ ಎದ್ದ ಕೂಡಲೇ ಕೊರಗಜ್ಜನ ಸನ್ನಿಧಾನ ಸಮೀಪ ಖಾಲಿ ಜಾಗದಲ್ಲಿ ನಾಗರ ಹಾವಿನ ಚಿತ್ರ ಮೂಡಿರುವುದು ಕೊರಜ್ಜನ ಮಹಿಮೆ ಇರಬಹುದು ಈ ಬಗ್ಗೆ ಚಿಂತನೆ  ನಡೆಸಲಾಗುವುದು ಎಂದು ಪುನೀತ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next