Advertisement
ಶ್ರೀ ವಿದ್ಯಾಧೀಶ ಶ್ರೀಪಾದಂಗಳವರ ದಿವ್ಯ ಪ್ರೇರಣೆ ಮತ್ತು ಶುಭಾಶೀರ್ವಾದಗಳೊಂದಿಗೆ ಜರಗಿದ ಶ್ರೀ ದೇವರ ಉತ್ಸವ ಕಾರ್ಯಕ್ರಮದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಮಹಾನಾ ರಾಯಣ ಅಷ್ಟಾಕ್ಷರ, ಮಂತ್ರ ಹವನ, ಬ್ರಹ್ಮ ಕಲಶ ಪ್ರತಿಷ್ಠಾಪೂಜೆ, ಬ್ರಹ್ಮಕಲಶಾ ಭಿಷೇಕ ನೆರವೇರಿತು.
Related Articles
ಇದೇ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಮಠದ ವಿದ್ವಾನ್ ರಾಧಾಕೃಷ್ಣ ಭಟ್ ಬೆಳಗ್ಗೆಯ ಮಹಾನಾರಾಯಣ ಅಷ್ಠಾಕ್ಷರ ಮಂತ್ರ ಹವನದೊಂದಿಗೆ ಪ್ರಾರಂಭಗೊಂಡ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪರಿಪೂರ್ಣಗೊಂಡಿತು.
Advertisement
ಬಾಲಾಜಿ ಸನ್ನಿಧಿಯಲ್ಲಿ ಜರಗಿದ ವರ್ಧಂತಿ ಮಹೋತ್ಸವದಲ್ಲಿ ಶ್ರೀ ದೇವರ ಅನುಗ್ರಹದಿಂದ ಸಮಸ್ತ ಭಕ್ತರ ಆರೋಗ್ಯ ಶಾಂತಿ, ಉದ್ಯೋಗ, ಶಿಕ್ಷಣ, ಸುಖಶಾಂತಿ ನೆಲೆಸುವಂತಾಗಲಿ. ಭಕ್ತರ ಭಕ್ತಿಯು ಪರಿಪೂರ್ಣಗೊಂಡಾಗ ಭಗವಂತನಿಗೂ ನೆಮ್ಮದಿಯಾಗುವುದು ಎಂದು ನುಡಿದು ಸನ್ನಿಧಿಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.
ವರ್ಧಂತಿ ಉತ್ಸವದ ಸೇವೆಯಲ್ಲಿ ಸಚ್ಚಿದಾನಂದ ದಂಪತಿ, ವಿಷ್ಣು ಪ್ರಸಾದ್ ಭಟ್, ಕಾರ್ತಿಕ್ ಭಟ್, ರಾಘವೇಂದ್ರ ನಕ್ಷತ್ರಿ, ಉದಯ ಶಂಕರ ಭಟ್, ಯತಿರಾಜ ಉಪಾಧ್ಯಾಯ, ವೆಂಕಟರಮಣ ಭಟ್, ಸುಬ್ರಹ್ಮಣ್ಯ ಭಟ್ ಹಾಗೂ ಪರಿವಾರ ಮತ್ತು ಜಗದೀಶ್ ಭಟ್ ಇವರುಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆದವು ವಿಷೇಶವಾಗಿ ರಥದ ಅಲಂಕಾರ ಸೇವೆಗೆ ಸುರೇಶ್ ಪೂಜಾರಿ, ಕರಮಚಂದ ಗೌಡ ಮೊದಲಾದವರು ಸಹಕರಿಸಿದರು. ಸ್ಥಳೀಯ ಅಸಂಖ್ಯಾತ ತುಳು-ಕನ್ನಡಿಗರ ಭಕ್ತರು ದಿನಪೂರ್ತಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಬಾಲಾಜಿಯ ದರ್ಶನ ಪಡೆದರು.
ಚಿತ್ರ-ವರದಿ : ರಮೇಶ್ ಉದ್ಯಾವರ