Advertisement

ಪ್ಯಾರಿಸ್‌: ನೀರಿನಲ್ಲಿ ಕೋವಿಡ್‌-19 ?

05:19 PM Apr 21, 2020 | sudhir |

ಪ್ಯಾರಿಸ್‌: ಪ್ಯಾರಿಸ್‌ನಲ್ಲಿ ರಸ್ತೆಯನ್ನು ಶುಚಿಗೊಳಿಸಲು ಬಳಸಲಾಗುವ ನೀರಿನಲ್ಲಿ ಸಣ್ಣ ಪ್ರಮಾಣದಲ್ಲಿ ಕೋವಿಡ್‌-19 ಕುರುಹುಗಳು ಪತ್ತೆಯಾಗಿದೆ.

Advertisement

ಪ್ಯಾರಿಸ್‌ ನೀರು ಪ್ರಾಧಿಕಾರ ಪ್ರಯೋಗಾಲಯವು ನಗರದ ಸುತ್ತಲೂ ಸಂಗ್ರಹಿಸಿದ 27 ಮಾದರಿಗಳ ಪೈಕಿ ನಾಲ್ಕರಲ್ಲಿ ಸಣ್ಣ ಪ್ರಮಾಣದ ವೈರಸ್‌ ಪತ್ತೆಯಾಗಿವೆ.

ಸದ್ಯ ಕುಡಿಯುವ ನೀರಿನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ನಗರದ ಅಧಿಕಾರಿಗಳು ತಿಳಿಸಿದ್ದು, ಬಳಕೆಗೆ ಸೀಮಿತವಾದ ನೀರಿನಲ್ಲಿ ಕೋವಿಡ್‌-19ನ ಅಲ್ಪ ಪ್ರಮಾಣದ ಕುರುಹುಗಳು ಕಂಡು ಬಂದಿರುವುದು ಆತಂಕ ಹುಟ್ಟಿಸಿದೆ.

ಈ ಹಿನ್ನೆಲೆಯಲ್ಲಿ ನೀರಿನ ಮೂಲವನ್ನು ಬಂದ್‌ ಮಾಡಲಾಗಿದ್ದು, ನಗರದ ಕುಡಿಯುವ ನೀರಿನ ಜಾಲವು ಸಂಪೂರ್ಣ ಸ್ವತಂತ್ರ ಮತ್ತು ಸಂರಕ್ಷಣೆಗೊಂಡಿದೆ. ಈ ನೀರಿನಲ್ಲಿ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next