Advertisement
ಮಕ್ಕಳಿಗೆ ಉತ್ತಮ ಸಂಸ್ಕಾರ, ಸಮಾಜಮುಖೀ ಚಿಂತನೆ, ಭಾವನೆ, ಪ್ರೀತಿ ವಾತ್ಸಲ್ಯ ಕಲಿಸುವ ಜವಾಬ್ದಾರಿ ಶಿಕ್ಷಕರ ಜೊತೆಗೆ ಹೆತ್ತವರದ್ದಾಗಿದೆ. ಅತ್ಯಾಚಾರ, ಉಗ್ರ ಚಟುವಟಿಕೆ, ಇನ್ನಿತರ ಅಪರಾಧಗಳಲ್ಲಿ ಅಪ್ರಾಪ್ತರೂ ಭಾಗಿರುವುದು ಕಳವಳಕಾರಿ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಆಸೆ ಇರುವಾಗೇ, ಮಕ್ಕಳು ಯಾವ ದಾರಿ, ಯಾರ ಸಹವಾಸದಲ್ಲಿದ್ದಾರೆ ಎಂಬ ಬಗ್ಗೆ ನಿಗಾವಹಿಸಬೇಕು.
Related Articles
Advertisement
ಸಂಸ್ಥೆ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ಮಾತನಾಡಿ, ಸುಂಸ್ಕೃತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಕ್ರಾಂತಿಯೇ ಸರಿ ಎಂಬ ಮಾತಿಗೆ ಸಂಸ್ಥೆಯಿಂದ ನಾನಾ ಕಾಲೇಜು ತೆರೆದು ಮೂಲಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಸೆಂಟ್ರಲ್ ಸ್ಕೂಲ್ ನಡೆಸುತ್ತಿದ್ದೇವೆ. ಉತ್ತಮ ಕಟ್ಟಡ, ತಂತ್ರಜ್ಞಾನ, ಕ್ರೀಡಾ ಮೈದಾನ, ಪ್ರಯೋಗಾಲಯ ಹೊಂದಿದ್ದು, ವಿದ್ಯಾರ್ಥಿಗಳಲ್ಲಿ ಆವಿಷ್ಕಾರ ಬುದ್ಧಿಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಅಟಲ್ ಟಿಂಕರಿಂಗ್ ಲ್ಯಾಬ್ ಮಂಜೂರು ಮಾಡಿಸಿಕೊಂಡಿದ್ದೇವೆ ಎಂದರು.
ಕಾರ್ಯದರ್ಶಿ ಕೆ.ಪಿ.ರುದ್ರಮುನಿಸ್ವಾಮಿ ಮಾತನಾಡಿ, 2003ರಲ್ಲಿ ಕೇವಲ 143 ಮಕ್ಕಳೊಂದಿಗೆ ಪ್ರಾರಂಭವಾಗಿರುವ ಶಾಲೆಯಲ್ಲಿ ಈಗ 1500ಕ್ಕೂ ಹೆಚ್ಚು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಪಠ್ಯ, ಪಠ್ಯೇತರ ಚಟುವಟಿಕೆ, ಕ್ರೀಡೆ, ಉತ್ತಮ ಗ್ರಂಥಾಲಯ, ಶೈಕ್ಷಣಿಕ ಪ್ರವಾಸ, ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಚೆನ್ನಾಗಿ ನಡೆಸಿಕೊಂಡು ಬರಲಾಗುತ್ತದೆ ಎಂದು ತಿಳಿಸಿದರು.
ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಖಜಾಂಚಿ ಟಿ.ಎಸ್. ಶಿವಪ್ರಸಾದ್ ಮಾತನಾಡಿ, ಕಳೆದ 12 ವರ್ಷದಿಂದ ಸಿಬಿಎಸ್‌ಸಿ ಬೋರ್ಡ್ ನಡೆಸುವ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆಯುತ್ತಿದ್ದೇವೆ. ಪ್ರತಿ ಮಕ್ಕಳ ವೈಯಕ್ತಿಕ ಕಲಿಕೆಗೆ ಹೆಚ್ಚು ಒತ್ತು ನೀಡುತ್ತ, ಮೂಲ ಸೌಲಭ್ಯ, ಉತ್ತಮ ಬೋಧನಾ ವ್ಯವಸ್ಥೆ ಮಾಡಿದ್ದೇವೆ. ಸಂಸ್ಥೆ ನಡೆಸುತ್ತಿರುವ ಮಾಂಟೆಸ್ಸರಿ, ಪಿಯುಸಿ, ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜುಗಳು ಸೇರಿ ಎಂಜಿನಿಯರಿಂಗ್ ಕಾಲೇಜಿನಲ್ಲೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಹೆಸರು ಪಡೆದಿದ್ದೇವೆ ಎಂದರು.
ವಿವಿಧ ಆಟೋಟಗಳಲ್ಲಿ ವಿಜೇತರಾದ ಮಕ್ಕಳಿಗೆ ಪಾರಿತೋಷಕ, ಬಹುಮಾನ ನೀಡಲಾಯಿತು. ಮಕ್ಕಳ ಆಕರ್ಷಕ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಿಇಒ ಬಿ. ಮಂಗಳಗೌರಮ್ಮ, ಸೆಂಟ್ರಲ್ ಸ್ಕೂಲ್ ಪ್ರಾಂಶುಪಾಲೆ ದೇವಿಕಾ ಬಿ. ಸ್ವಾಮಿ ವಾರ್ಷಿಕ ವರದಿ ಓದಿದರು. ಉಪಾಧ್ಯಕ್ಷರಾದ ಎಸ್.ಎಸ್.ನಟರಾಜು, ಕಾರ್ಯದರ್ಶಿ ರಾಜಕುಮಾರ್, ಟಿ.ಯು.ಜಗದೀಶ್ ಮೂರ್ತಿ ಅನೇಕ ಗಣ್ಯರಿದ್ದರು.
ಹಳ್ಳಿಗಳು ಖಾಲಿ!: ಪ್ರಸ್ತುತ ದಿನಗಳಲ್ಲಿ ಬಡವ, ಸಾಮಾನ್ಯ, ರೈತ ಎಂಬ ಬೇಧ ಭಾವವಿಲ್ಲದೆ ಎಲ್ಲರೂ ಮಕ್ಕಳು ನಗರದ ಕಾನ್ವೆಂಟ್‌ಗಳಲ್ಲೇ ಓದಬೇಕು. ಅದರಲ್ಲೂ ಉತ್ತಮ ಹೆಸರು ಪಡೆದಿರುವ ಶಿಕ್ಷಣ ಸಂಸ್ಥೆಗಳಲ್ಲೇ ಓದಬೇಕು. ಉತ್ತಮ ಕೆಲಸ ಸಿಗಬೇಕೆಂಬ ಆಸೆಯಿಂದ ಹಳ್ಳಿ ತೊರೆದು ನಗರ, ಪಟ್ಟಣಗಳಲ್ಲೇ ಮನೆ ಮಾಡಿಕೊಂಡಿದ್ದಾರೆ. ಕಷ್ಟದಲ್ಲಿದ್ದರೂ ದುಡಿದು, ಕೆಲವೊಮ್ಮೆ ಜಮೀನು ಮಾರಿ ಓದಿಸುತ್ತಾರೆ.
ಹಿಂದೆ ಯುವಕರು ಉದ್ಯೋಗಕ್ಕೋಸ್ಕರ ಹೆತ್ತವರ ಬಿಟ್ಟು ಹಳ್ಳಿ ತೊರೆದು ನಗರಗಳಿಗೆ ವಲಸೆ ಬರುವುದು ಸಾಮಾನ್ಯವಾಗಿತ್ತು. ಆದರೆ ಈಗ ಮಕ್ಕಳನ್ನು ಓದಿಸಲು ಹೆತ್ತವರು ಹಳ್ಳಿ ತೊರೆಯುತ್ತಿದ್ದಾರೆ. ಇದನ್ನು ತಡೆಯಲು ಸರ್ಕಾರಗಳು ಹಳ್ಳಿಗಳಲ್ಲಿ ಉತ್ತಮ ಸೌಲಭ್ಯವುಳ್ಳ ಶಾಲೆ ತೆರೆಯಬೇಕು ಎಂದು ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಹೇಳಿದರು.