ಕಾಸರಗೋಡು: ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಸಮಸ್ಯೆ ಪರಿಹಾರ ನಿಟ್ಟಿನಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಹವಾಲು ಸ್ವೀಕಾರ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರಗಿತು.
ಆಯೋಗ ಸದಸ್ಯ ಟಿ.ವಿ. ಮಹಮ್ಮದ್ ಫೈಝಲ್ ನೇತೃತ್ವ ವಹಿಸಿದ್ದರು. ಸಭೆಯಲ್ಲಿ ಒಟ್ಟು 15 ಅಹವಾಲುಗಳನ್ನು ಪರಿಶೀಲಿಸಿ 2 ದೂರುಗಳಿಗೆ ತೀರ್ಪು ನೀಡಲಾಯಿತು.
ಮಕ್ರೇರಿ ಚೋರಕುಳಂನಲ್ಲಿ ಮಹಿಳೆಯ ಕೊರಳಿಂದ ಸರ ಸೆಳೆದೊಯ್ದ ಪ್ರಕರಣದಲ್ಲಿ ನಿರಪರಾಧಿ ತಮ್ಮ ಪತಿ ವಿರುದ್ಧ ಅಕ್ರಮಕೇಸು ದಾಖಲಿಸಿದ ತಲಶೆÏàರಿ ಕದಿರೂರು ನಿವಾಸಿ ಮಹಿಳೆ ನೀಡಿದ ದೂರಿನಂತೆ ಪ್ರಕರಣದ ವಿಚಾರಣೆ ನಡೆಯಿತು. ಪ್ರಕರಣದ ತನಿಖೆ ನಡೆಸಿದ ಚಕ್ಕರಕಲ್ ಠಾಣೆಯ ಎಸ್.ಐ.ಬಿಜು, ಎ.ಎಸ್.ಐ.ಗಳಾದ ಉಣ್ಣಿಕೃಷ್ಣನ್, ಯೋಗೇಶ್ ಹಾಜರಾಗಿದ್ದು, ಉತ್ತರ ನೀಡಲು ಇವರು ಕಾಲಾವಕಾಶ ಯಾಚಿಸಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿದೆ.
ಅರ್ಜಿ ಸಲ್ಲಿಸಿಯೂ ಪೋಸ್ಟ್ ಮೆಟ್ರಿಕ್ ಸ್ಕಾಲರ್‌ಶಿಪ್ ನೀಡದೇ ಇರುವ ಪ್ರಕರಣದಲ್ಲಿ ವೆಳ್ಳರಿಕುಂಡ್ ನಿವಾಸಿ ವಿದ್ಯಾರ್ಥಿನಿಯೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ನಿರ್ದೇಶಕರು ಈ ಸಂಬಂಧ ಸ್ಪಷ್ಟೀಕರಣ ನೀಡುವಂತೆ ಆದೇಶ ನೀಡದ್ದಾರೆ.
ಕಣ್ಣೂರು ಜಿಲ್ಲಾ ಧಿಕಾರಿ ಕಚೇರಿಯಿಂದ ಪ್ರತ್ಯೇಕ ಅನುಮತಿ ಪಡೆದರೂ, ಕೊಳವೆಬಾವಿ ನಿರ್ಮಿಸಿದ್ದರೂ, ಇದರ ನೀರು ಎತ್ತಲು ಸ್ಥಳೀಯ ಕೆಲವರು ವಿರೋಧ ಮಾಡುತ್ತಿದ್ದಾರೆ ಎಂಬ ಬಗ್ಗೆ ಚೆಂಬಿಲೋಡ್ ಗ್ರಾಮಪಂಚಾಯತ್ ನಿವಾಸಿ ಮಹಿಳೆಯೊಬ್ಬರು ನೀಡಿರುವ ದೂರಿನಲ್ಲಿ ವರದಿ ನೀಡುವಂತೆ ಕಣ್ಣೂರು ಜಿಲ್ಲಾ ಧಿಕಾರಿ ಕಚೇರಿಗೆ ಆದೇಶ ನೀಡಲಾಗಿದೆ.