Advertisement

ಕಾಂಗ್ರೆಸ್‌ ಬೆಂಬಲಿಸುವ ಅಲ್ಪಸಂಖ್ಯಾತರು

03:31 PM May 10, 2018 | |

ಬೇಲೂರು: ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ಸರ್ಕಾರ ಅಹಿಂದ ವರ್ಗಕ್ಕೆ ಜನಪರ ಯೋಜನಗಳ ಮಹಾಪೂರ
ಹರಿಸಿದೆ, ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಕಾಂಗ್ರೆಸ್‌ ಪಕ್ಷ ಬೆಂಬಲಿಸಲಿದ್ದಾರೆ ಎಂದು ತಾಲೂಕು ಅಹಿಂದ ವರ್ಗದ ಅಧ್ಯಕ್ಷ ಬಿ.ಎಲ್‌. ಧರ್ಮೇಗೌಡ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್‌ ಪಕ್ಷಕ್ಕೆ ತಾಲೂಕಿನ ಹಿಂದುಳಿದ ವರ್ಗವು ಬೆಂಬಲ ನೀಡುತ್ತಾರೆ ಎಂದು
ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ನಾಗೇಶ್‌ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ
ಹೊರತು ಎಲ್ಲ ಹಿಂದುಳಿದ ವರ್ಗದ ಹೇಳಿಕೆ ಅಲ್ಲ, ಒಂದು ವೇಳೆ ಇದೇ ಹೇಳಿಕೆಯನ್ನು ತಾಲೂಕು ಹಿಂದುಳಿದ
ವರ್ಗ ಒಕ್ಕೂಟದ ಅಧ್ಯಕ್ಷ ಇ.ಎಚ್‌. ಲಕ್ಷ್ಮಣ್‌ ಹೇಳಿದ್ದರೆ ಮನ್ನಣೆ ಇತ್ತು, ಹಿಂದುಳಿದ ವರ್ಗವು ಸಿದ್ದರಾಮಯ್ಯರ ಜನಪರ ಯೋಜನೆಗಳಿಗೆ ಮೆಚ್ಚಿ ಕಾಂಗ್ರೆಸ್‌ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುತ್ತಾರೆ ಕಾಂಗ್ರೆಸ್‌ ಅಭ್ಯರ್ಥಿ ಕೀರ್ತತಾ ಜಯ ಖಚಿತ ಎಂದರು.

ಹಿಂದುಳಿದ ವರ್ಗದ ಮುಖಂಡ ರಾದ ತೀರ್ಥಂಕರ್‌ ಮಾತನಾಡಿ, ರುದ್ರೇಶಗೌಡರ ಪತ್ನಿ ಕೀರ್ತನಾ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಉತ್ತಮ ಸಂಚಾರ ಮಾಡಿ ದ್ದಾರೆ, ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮ ಬಾರಿ ಒಬ್ಬ ಮಹಿಳೆಯನ್ನು ಆಯ್ಕೆ ಮಾಡಲು ಜನರು ಉತ್ಸಕರಾಗಿದ್ದಾರೆ ಎಂದು ತಿಳಿಸಿದರು.

ತಾಲೂಕು ಅಲ್ಪಸಂಖ್ಯಾತರ ಅಧ್ಯಕ್ಷ ಸಲೀಂಪಾಷಾ ಮಾತನಾಡಿ, ಕಾಂಗ್ರೆಸ್‌ ಪಕ್ಷ ಅಲ್ಪಸಂಖ್ಯಾತರಿಗೆ ಆಶಾಕಿರಣ
ವಾಗಿದೆ. ಬೇಲೂರು ವಕ್ಫ್ ಮಂಡಳಿಗೆ ಸಿದ್ದರಾಮಯ್ಯ 2 ಕೋಟಿ ರೂ. ನೀಡಿದ್ದಾರೆ. ಹಾಗೇಯೇ ಅಲ್ಪಸಂಖ್ಯಾತರ
ಕಲ್ಯಾಣಕ್ಕಾಗಿ ಅಪಾರ ಅನುದಾನ ನೀಡಿರುವ ಹಿನ್ನೆಲೆಯಲ್ಲಿ ಬೇಲೂರು ಕ್ಷೇತ್ರದ ಅಲ್ಪಸಂಖ್ಯಾತ ಬಹುತೇಕರು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂದರು. ಹಿಂದುಳಿದ ವರ್ಗದ ಮುಖಂಡರಾದ ನಾಗರಾಜು, ಬಸೀರ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next