Advertisement
ಮೂರು ದಶಕಗಳಿಗೂ ಹೆಚ್ಚು ಕಾಲ ರಾಜಕಾರಣದಲ್ಲಿ ಪಳಗಿ ರುವ ನಾಗಸಂದ್ರದ ಎನ್.ಎಚ್.ಶಿವಶಂಕರರೆಡ್ಡಿ ಗ್ರಾಮ ಪಂಚಾಯಿತಿ ಮಟ್ಟದಿಂದ ರಾಜಕಾರಣ ಪ್ರವೇಶಿಸಿ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹಂತದಲ್ಲಿ ನಾಯಕರಾಗಿ ಬೆಳೆದು ಬಂದವರು. ಮಂಡಲ್ ಪ್ರಧಾನರಾಗಿ, ತಾಪಂ ಸದಸ್ಯರಾಗಿ ಗೌರಿಬಿದನೂರು ತಾಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
Related Articles
ಶಿವಶಂಕರರೆಡ್ಡಿ ಹಿರಿತನವನ್ನು ಪರಿಗಣಿಸಿ ಕಾಂಗ್ರೆಸ್ ಸರ್ಕಾರ ವಿಧಾನಸಭೆ ಉಪ ಸಭಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದೀಗ ಐದನೇ ಬಾರಿ ಗೆದ್ದ ಹಿನ್ನೆಲೆಯಲ್ಲಿ ಜಿಲ್ಲಾ ಕೋಟಾದಡಿ ಎನ್.ಎಚ್. ಶಿವಶಂಕರರೆಡ್ಡಿಗೆ ಸಚಿವ ಸ್ಥಾನ ಸುಲಭವಾಗಿ ದಕ್ಕಿದೆ. ಪ್ರಬಲ ಸಮುದಾಯವಾಗಿರುವ ವೇಮನ ರೆಡ್ಡಿ ಸಮುದಾಯಕ್ಕೆ ಸೇರಿದ್ದಾರೆ
Advertisement
ಗೌರಿಬಿದನೂರಿಗೆ 2ನೇ ಬಾರಿ ಸಚಿವ ಸ್ಥಾನ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 1983ರಲ್ಲಿ ನಡೆದ ಉಪಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಆಗಿನ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣರಾವ್ ವಿರುದ್ಧ ಗೆಲುವು ಸಾಧಿಸಿದ್ದಆರ್.ಎನ್.ಲಕ್ಷ್ಮೀಪತಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವರಾಗಿ,
ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಬರೋಬ್ಬರಿ 35 ವರ್ಷಗಳ ಬಳಿಕ
ಇದೀಗ ಮತ್ತೆ ಗೌರಿಬಿದನೂರು ಕ್ಷೇತ್ರದ ಶಾಸಕ ಎನ್.ಎಚ್. ಶಿವಶಂಕರೆಡ್ಡಿ ಸಚಿವರಾಗುವ ಮೂಲಕ ಗೌರಿಬಿದನೂರಿಗೆ ಎರಡನೇ ಬಾರಿಗೆ ಮಂತ್ರಿ ಯೋಗ ಲಭಿಸಿದೆ. ಸಚಿವ ಶಿವಶಂಕರೆಡ್ಡಿ ಕೃಷಿ ವಿಜ್ಞಾನ ಪದವೀಧರ ಮೈತ್ರಿ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿರುವ ಎನ್.
ಎಚ್.ಶಿವಶಂಕರರೆಡ್ಡಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಗಸಂದ್ರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ
ಕುಟುಂಬವಾಗಿರುವ ಸುಭಾಷಣಮ್ಮ ಹಾಗೂ ಎನ್.ಎಸ್. ಹನುಮಂತರೆಡ್ಡಿ ದಂಪತಿ ಹಿರಿಯ ಪುತ್ರರಾಗಿದ್ದು, ಸೆ.24,
1954 ರಲ್ಲಿ ಹುಟ್ಟಿದ್ದಾರೆ. ಪತ್ನಿ ಸುಜಾತಮ್ಮ, ಮೂವರು ಸಹೋದರರು, ಇಬ್ಬರು ಸಹೋದರಿಯರು, ಓರ್ವ ಪುತ್ರ,
ಓರ್ವ ಪುತ್ರಿ ಇದ್ದಾರೆ. ರೈತ ಕುಟುಂಬದಲ್ಲಿ ಬೆಳೆದಿರುವ ಶಿವಶಂಕರರೆಡ್ಡಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ಕೃಷಿ
ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ. ರೆಡ್ಡಿ ಹುಟ್ಟೂರು ನಾಗಸಂದ್ರ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ ಕಾಗತಿ ನಾಗರಾಜಪ್ಪ