Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಮನೆ ಆರೈಕೆಯಲ್ಲಿರುವವರಿಗೆ ಪ್ರತಿ ದಿನ ಕಾಲ್ ಸೆಂಟರ್ ನಿಂದ ಕರೆ ಮಾಡಿ ಮಾರ್ಗದರ್ಶನ ನೀಡಲಾಗುತ್ತದೆ. ಜೊತೆಗೆ ಔಷಧಿ ಕಿಟ್ ನೀಡಲಾಗುತ್ತದೆ. ಯು.ಕೆ.ಯಲ್ಲಿ ರೋಗಿಗಳನ್ನು ಮನೆಯಲ್ಲೇ ಇರಿಸಿ ಆಸ್ಪತ್ರೆ ಮೇಲೆ ಒತ್ತಡವಿಲ್ಲದಂತೆ ಮಾಡಿ ಸಾವಿನ ಪ್ರಮಾಣ ಕಡಿಮೆ ಮಾಡಲಾಗಿದೆ. ಇದೇ ರೀತಿ ರಾಜ್ಯದಲ್ಲೂ ಮಾಡಲಾಗುವುದು. ರಾಜ್ಯದಲ್ಲಿ 2 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಎಲ್ಲರಿಗೂ ಕರೆ ಮಾಡಲು ಸಿಬ್ಬಂದಿ ಬೇಕಾಗುತ್ತದೆ. ಇದಕ್ಕಾಗಿ ಸಿಐಐ ಸಹಯೋಗ ಪಡೆಯಲಾಗಿದೆ ಎಂದರು.
Related Articles
Advertisement
ಇದಕ್ಕೂ ಮುನ್ನ ಖಾಸಗಿ ಆಸ್ಪತ್ರೆಗಳ ಪ್ರಮುಖರೊಂದಿಗೆ ಸಚಿವರು ಸಭೆ ನಡೆಸಿದರು. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳು ಕಳೆದ ವರ್ಷಕ್ಕಿಂತ ಕಡಿಮೆ ಹಾಸಿಗೆಗಳನ್ನು ಮೀಸಲಿಟ್ಟಿವೆ. ಈಗ ಕೋವಿಡ್ ಪಾಸಿಟಿವ್ ಆದವರೆಲ್ಲ ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಆದ್ದರಿಂದ ನಾನ್ ಕೋವಿಡ್ ಬಿಟ್ಟು ಕೋವಿಡ್ ಗೆ ಒತ್ತು ನೀಡುವುದು ಅನಿವಾರ್ಯ ಎಂದರು.
ಖಾಸಗಿ ಆಸ್ಪತ್ರೆಗಳು 75% ಹಾಸಿಗೆಗಳನ್ನು ಸರ್ಕಾರಕ್ಕೆ ನೀಡಬೇಕು. ಈ ಪೂರ್ತಿ ಹಾಸಿಗೆಗಳು ಸರ್ಕಾರಕ್ಕೆ ಸಲ್ಲಬೇಕು. ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್ ನಿಂದ ಇದಕ್ಕೆ ಪಾವತಿ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.
ಸಚಿವರು ಹೇಳಿದ ಇತರೆ ಅಂಶಗಳು
ಅಗತ್ಯ ಸೇವೆಗಳಿಗೆ ಯಾವುದೇ ಅಡ್ಡಿ ಮಾಡುವುದಿಲ್ಲ. ಆಸ್ಪತ್ರೆಗೆ ಹೋಗಲು, ಲಸಿಕೆ ಪಡೆಯಲು ಹೋಗುವವರಿಗೆ ಯಾರೂ ಅಡ್ಡಿ ಮಾಡುವುದಿಲ್ಲ. 14 ದಿನ ಕಡ್ಡಾಯವಾಗಿ ದೂರ ಇದ್ದು, ಕೋವಿಡ್ ಚೈನ್ ಅನ್ನು ಮುರಿಯಬೇಕು. ಪಾಸಿಟಿವ್ ಆದ ಕೂಡಲೇ ಮನೆಯವರೊಂದಿಗೂ ಬೆರೆಯಬಾರದು. ಮೇ 1 ರಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬಹುದು. ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗುವುದು ಎಂದರು.