Advertisement
ತಾಲೂಕಿನ ಸೋಸಲೆ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳು ಮತ್ತು ಹಳ್ಳಿಗಳಲ್ಲಿ ಪ್ರವಾಸ ಕೈಗೊಂಡಿದ್ದ ಸಚಿವರು, ಅಂತಿಮ ಹಂತದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ಕೊಟ್ಟರು. ಅಪರೂಪಕ್ಕೆ 6-7 ತಿಂಗಳಿಗೊಮ್ಮೆ ಸುಳಿಯುತ್ತಿದ್ದವರು ಶನಿವಾರ ಮಿಂಚಿನ ಸಂಚಾರ ಕೈಗೊಂಡು ಜನತಾ ದರ್ಶನ ನಡೆಸಿದರು. ಅಲ್ಲದೆ, ಮುಖಂಡರನ್ನು ಗುರುತಿಸಿ ಮಾತನಾಡಿಸುವ ಮೂಲಕ ಚುನಾವಣೆ ಬರುತ್ತಿದೆ ನಾನ್ಯಾರನ್ನೂ ಮರೆತಿಲ್ಲವೆಂದು ಜನರ ಗಮನ ಸೆಳೆಯುವ ಕಸರತ್ತು ನಡೆಸಿದರು.
Related Articles
Advertisement
ಕೈಯಂಬಳ್ಳಿ ಗ್ರಾಮದಲ್ಲಿ ರಸ್ತೆ-ಚರಂಡಿ ನಿರ್ಮಾಣಕ್ಕೆ 25 ಲಕ್ಷ ಹಾಗೂ ಕೃಷ್ಣಾಪುರ ಗ್ರಾಮದಲ್ಲಿ ರಸ್ತೆ-ಚರಂಡಿ ನಿರ್ಮಾಣ ಕಾಮಗಾರಿಗೆ 20 ಲಕ್ಷ ಅನುದಾನ ಮಂಜೂರು ಮಾಡಿದ್ದು ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಅಲ್ಲದೆ ಸಿದ್ದನಹುಂಡಿ, ಗದ್ದೆಮೋಳೆ, ಕೆಂಡನಕೊಪ್ಪಲು, ಕೋಳಿಮಲ್ಲನಹುಂಡಿ ಹಾಗೂ ಚಿಕ್ಕಬೂವಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಅಹವಾಲು ಆಲಿಸಿದರು.
ಜಿಪಂ ಸದಸ್ಯರಾದ ಮಂಗಳಮ್ಮ, ಮಂಜುನಾಥನ್, ಎಸ್ಸಿ,ಎಸ್ಟಿ ಹಿತರಕ್ಷಣಾ ಸಮಿತಿ ಸದಸ್ಯ ಸೋಸಲೆ ಮಹದೇವಸ್ವಾಮಿ, ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಗ್ರಾಪಂ ಅಧ್ಯಕ್ಷೆ ಮಹದೇವಮ್ಮ, ಬಿ.ಎನ್.ಜಗದೀಶ್, ಉಪಾಧ್ಯಕ್ಷ ಆರ್.ರಾಮು, ತಾಪಂ ಇಒ ಬಿ.ಎಸ್.ರಾಜು, ಜಿಪಂ ಇಇ ರಂಗಯ್ಯ, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರಿದ್ದರು.ಗದ್ದೆಮೋಳೆಯಲ್ಲಿ ಮನೆ ಮನೆ ಕಾಂಗ್ರೆಸ್
ತಿ.ನರಸೀಪುರ ತಾಲೂಕಿನ ಗದ್ದೆಮೋಳೆ ಗ್ರಾಮದಲ್ಲಿ ರಾಜ್ಯ ಸರ್ಕಾರದ ಸಾಧನೆಗಳ ಕೈಪಿಡಿಯನ್ನು ಜನರಿಗೆ ವಿತರಿಸುವ ಮೂಲಕ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮನೆ ಮನೆ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ರಂಗಭೂಮಿ ಕಲಾವಿದ ಹೊನ್ನನಾಯಕ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸಚಿವರು, ಗ್ರಾಮದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದರು. ನಂತರ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ರೈತಪರ ಮತ್ತು ಬಡವರ ಪರ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಮತ್ತೂಮ್ಮೆ ಬೆಂಬಲಿಸಬೇಕೆಂದರು.