Advertisement

ಹಾರೆ ಹಿಡಿದು ಗುಂಡಿ ತೋಡಿದ ಸಚಿವರು

05:10 AM May 17, 2020 | Lakshmi GovindaRaj |

ಚಾಮರಾಜನಗರ: ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸುರೇಶ್‌ ಕುಮಾರ್‌ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮಗಳಿಗೆ ಭೇಟಿ ನೀಡಿ ನರೇಗಾ ಕಾಮಗಾರಿಗಳನ್ನು ವೀಕ್ಷಿಸಿ, ಹಾರೆ ಹಿಡಿದು ಗುಂಡಿ ತೋಡಿ ಗಮನ ಸೆಳೆದರು. ಉದ್ಯೋಗ  ಖಾತರಿ ಯೋಜನೆಯಲ್ಲಿ ತೊಡಗಿಕೊಂ ಡಿದ್ದ ಕಾರ್ಮಿಕರಿಗೆ ಉತ್ಸಾಹ ತುಂಬಿದರು. ಗುಂಡ್ಲು ಪೇಟೆಯ ಕಲಿಗೌಡನಹಳ್ಳಿ ವ್ಯಾಪ್ತಿಗೆ ಒಳಪಡುವ ಒಗರಕಟ್ಟೆಗೆ ಭೇಟಿ ನೀಡಿ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದರು.

Advertisement

ಬಳಿಕ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದ ಸಚಿವರು, ಕಷ್ಟಪಟ್ಟು ದುಡಿದ ಹಣವನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿ ಕೊಳ್ಳಿ. ಕೆಲಸ ನಿರ್ವಹಿಸುವಾಗ ಭೌತಿಕ ಅಂತರ ಕಾಪಾಡಿಕೊಳ್ಳಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ಸಲಹೆ ನೀಡಿದರು.  ಆ ಬಳಿಕ ಹಂಗಳದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫೀಡರ್‌ ಕಾಲುವೆ ಬಳಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಬಳಿ ತೆರಳಿ ಅಲ್ಲಿನ ಕಾಮಗಾರಿಯನ್ನು ವೀಕ್ಷಿಸಿದರು.

ಶಿವಪುರ, ಚಾಮರಾಜನಗರ ತಾಲೂಕಿನ ದೇವಲಾ ಪುರ, ದೊಡ್ಡಮೋಳೆಗೆ  ಭೇಟಿ ನೀಡಿ ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಲಾಗುತ್ತಿರುವ ಕಾಮಗಾರಿ ಯನ್ನು ಸಚಿವರು ಪರಿಶೀಲಿಸಿದರು. ಉದ್ಯೋಗ ಖಾತರಿ ಯೋಜನೆಯಡಿ ಕಾರ್ಮಿಕರಿಗೆ ಒದಗಿಸಬೇಕಿರುವ ನೆರ ಳಿನ ವ್ಯವಸ್ಥೆ, ಕುಡಿಯುವ ನೀರು  ಇನ್ನಿತರ ಸೌಲಭ್ಯ ಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ನರೇಗಾದಡಿ ಹೆಚ್ಚು ಮಂದಿಗೆ ಕೆಲಸ ನೀಡಲಾಗು ತ್ತಿದೆ. ಇದು 5 ಕೋಟಿ ರೂ. ಹಣ ಕೂಲಿ ಕಾರ್ಮಿಕರ ಖಾತೆಗಳಿಗೆ ಜಮೆಯಾಗಿದೆ ಎಂದರು. ಈ ವೇಳೆ ಶಾಸಕ ನಿರಂಜನಕುಮಾರ್‌, ಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ, ಜಿಪಂ ಸಿಇಒ ನಾರಾಯಣರಾವ್‌, ಎಎಸ್ಪಿ ಅನಿತಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next