Advertisement

ಸಚಿವ ವಿನಯ ಕುಲಕರ್ಣಿ ಹತ್ಯೆಗೆ ಸಂಚು? 

11:35 AM Dec 14, 2017 | Team Udayavani |

ಧಾರವಾಡ: ಯೋಗೀಶಗೌಡ ಕೊಲೆ ಪ್ರಕರಣದ ಆರೋಪಿ ಬಸವರಾಜ ಮುತ್ತಗಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌
ಕುಲಕರ್ಣಿ ಅವರನ್ನು ಹತ್ಯೆ ಮಾಡಲು ಆದಿತ್ಯ ಮಯೂರ ರೇಸಾರ್ಟ್‌ನಲ್ಲಿ ಸಂಚು ರೂಪಿಸಿರುವ ಸಂಶಯ ವ್ಯಕ್ತವಾಗಿದೆ ಎಂದು ಮಹಾನಗರ ಪೊಲೀಸ್‌ ಆಯುಕ್ತ ಎಂ. ಎನ್‌.ನಾಗರಾಜ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನವಲೂರು ಬಳಿ ಇರುವ ಆದಿತ್ಯ ಮಯೂರ ಹೋಟೆಲ್‌ ಹೊರಭಾಗದಲ್ಲಿ
ಮಂಗಳವಾರ ತಡರಾತ್ರಿ ಗುಂಡು ಹಾರಿಸಿದ ಘಟನೆ ನಡೆದಿದ್ದು, ಗುಂಡು ಹಾರಿಸಲು ಕಾರಣರಾದ ಮೂವರು ಆರೋಪಿಗಳ ಪೈಕಿ
ಓರ್ವ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ಆರೋಪಿಗಳು ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅಥವಾ ಯೋಗೀಶಗೌಡ ಕೊಲೆಯ ಮುಖ್ಯ ಆರೋಪಿ ಬಸವರಾಜ ಮುತ್ತಗಿಯನ್ನು ಕೊಲೆ ಮಾಡಲು ಸಂಚು ರೂಪಿಸಿ 
ದ್ದರಾ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಆದರೆ, ವಿಚಾರಣೆ ನಂತರವೇ ಸತ್ಯಾಸತ್ಯತೆ ಹೊರಬೀಳಲಿದೆ ಎಂದರು. ಮಲಪ್ರಭಾ ನಗರದ ಹನುಮಂತಗೌಡ ಪಾಟೀಲ,
ರಾಘವೇಂದ್ರ ಮತ್ತು ನಾಗರಾಜ್‌ ಎಂಬುವವರನ್ನು ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ದಂತೆ ವಶಕ್ಕೆ 
ಪಡೆಯಲಾಗಿದ್ದು,ಬಂಧಿತ ಹನುಮಂತಗೌಡ ಅವರಿಂದ ಪರವಾನಗಿ ಇರುವ ಪಿಸ್ತೂಲ್‌, ನಾಲ್ಕು ಸಜೀವ ಗುಂಡು ಮತ್ತು 5 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ. ಯಾವ ಕಾರಣಕ್ಕಾಗಿ ಗುಂಡು ಹಾರಿಸಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next