Advertisement

ಸಚಿವ ವಿನಯ ಕುಲಕರ್ಣಿಗೆ ಗೃಹ ಬಲ

07:15 AM Nov 28, 2017 | Team Udayavani |

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಹತ್ಯೆ ಪ್ರಕರಣದಲ್ಲಿ ಸಚಿವ ವಿನಯ
ಕುಲಕರ್ಣಿ ಪಾತ್ರ ಇಲ್ಲವೇ ಇಲ್ಲ. ಬಿಜೆಪಿಯ ಈ ಆರೋಪ ರಾಜಕೀಯ ಪ್ರೇರಿತ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ
ತಿಳಿಸಿದ್ದಾರೆ.

Advertisement

ವಿಕಾಸಸೌಧದಲ್ಲಿ ಸೋಮವಾರ ಪೊಲೀಸ್‌ ಅಧಿಕಾರಿಗಳ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆಯಾದ ಯೋಗೀಶ್‌ ಗೌಡ ರೌಡಿ ಶೀಟರ್‌ ಆಗಿದ್ದ. ಆತನ ವಿರುದ್ಧ 25 ಮೊಕದ್ದಮೆಗಳಿದ್ದವು. ಈತನ ಕೊಲೆ ಆರೋಪಿ ಬಸವರಾಜ್‌ ಮುತ್ತಗಿ ಜತೆ ಜಮೀನು ವ್ಯಾಜ್ಯವಿದೆ. ಈ ಕಾರಣಕ್ಕೆ ಹತ್ಯೆ ನಡೆದಿದೆ. ಇದು ಗೊತ್ತಿದ್ದರೂ ಬಿಜೆಪಿ ರಾಜಕೀಯ ಪ್ರೇರಿತ ಹೋರಾಟ ನಡೆಸುತ್ತಿದೆ ಎಂದು ಕಿಡಿಕಾರಿದರು.

ಕೆಂಪಯ್ಯ ಸಂಧಾನ ಊಹಾಪೋಹ: ಯೋಗೀಶ್‌ಗೌಡ ಹತ್ಯೆ ಪ್ರಕರಣದಲ್ಲಿ ಗೃಹ ಸಚಿವರ ಸಲಹೆಗಾರ ಕೆಂಪಯ್ಯ
ಸಂಧಾನ ಮಾಡುತ್ತಿದ್ದಾರೆಂಬ ಶೋಭಾ ಕರಂದ್ಲಾಜೆ ಆರೋಪವನ್ನು ತಳ್ಳಿಹಾಕಿದರು. ಇವೆಲ್ಲವೂ ಊಹಾಪೋಹ. ಶೋಭಾ ಅವರು ದಾಖಲೆ ಸಹಿತ ಈ ಕುರಿತು ಮಾತನಾಡಲಿ ಎಂದರು.

ಸರ್ಕಾರದ ವಿರುದ್ಧ ಹೋರಾಟಕ್ಕೆ ಬಿಜೆಪಿಯವರಿಗೆ ಯಾವುದೇ ವಿಷಯ ಸಿಗುತ್ತಿಲ್ಲ. ಆ ಪಕ್ಷದ ರಾಜ್ಯಾಧ್ಯಕ್ಷರು ಹೋರಾಟ ಮಾಡಿ ಎಂದು ಹೇಳಿದ್ದಕ್ಕೆ ಸಚಿವ ರಾದ ವಿನಯ ಕುಲಕರ್ಣಿ ಮತ್ತು ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ನೇರ ಹೋರಾಟ ನಡೆಯುತ್ತದೆಯೇ ಹೊರತು ಬಿಜೆಪಿ ಲೆಕ್ಕಕ್ಕಿಲ್ಲ ಎಂದು ಹೇಳಿದರು.

ನಂತರ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವ ರಾಮಲಿಂಗಾರೆಡ್ಡಿ, ಪೊಲೀಸ್‌ ಜನಸ್ನೇಹಿ ಕೇಂದ್ರಕ್ಕೆ ಬರುವ ಜನರ ಜತೆ ಅನ್ಯೋನ್ಯವಾಗಿ ಮತ್ತು ಪ್ರೀತಿಯಿಂದ ನಡೆದುಕೊಂಡು ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next