Advertisement
ಪಟ್ಟಣದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಆವರಣ ದಲ್ಲಿ ಮಂಗಳವಾರ ಮೈಸೂರು-ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯಿತ ಮಠಾಧಿಪತಿಗಳ ಗೋಷ್ಠಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ 107ನೇ ಜಯಂತಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶಿವದೀಕ್ಷೆ- ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
Advertisement
ರಾಜೇಂದ್ರರ ಜೀವನವೇ ನಮಗೆ ಸಂದೇಶ: ಸಿದ್ಧ ಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮತನಾಡಿ, ಸುತ್ತೂರು ಮಠದ ರಾಜೇಂದ್ರ ಶ್ರೀಗಳ ಜೀವನವೇ ನಮಗೆ ಉತ್ತಮ ಸಂದೇಶವಾಗಿದೆ. ತಮ್ಮ ಜೀವಿತಾವಧಿಯಲ್ಲಿ ಬಡವರ ಶಿಕ್ಷಣಕ್ಕೆ ಇವರು ಪಟ್ಟ ಪಾಡು ಇದಕ್ಕಾಗಿ ಮಾಡಿದ ತ್ಯಾಗ ಅನುಕರಣೀಯವಾಗಿದೆ. ಮಾನವೀಯತೆಯ ದೊಡ್ಡ ಸಾಕಾರ ಮೂರ್ತಿಯಾದ ಇವರು, ಶಿಕ್ಷ ಣವೇ ಸಮಸ್ತ ಪ್ರಗತಿಯ ಬೀಜ ಅದೇ ತಾಯಿ ಬೇರು ಎಂದು ನಂಬಿದ್ದು, ಹಾಗೇ ಬದುಕಿ ತೋರಿಸಿ ಕೊಟ್ಟರು ಎಂದು ಹೇಳಿದರು.
ಶಿವಕುಮಾರ ಶ್ರೀ, ರಾಜೇಂದ್ರ ಶ್ರೀ ಒಂದೇ ನಾಣ್ಯ: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಲಿಂಗೈಕ್ಯ ಡಾ.ಶಿವ ಕುಮಾರ ಸ್ವಾಮೀಜಿ, ರಾಜೇಂದ್ರ ಮಹಾಸ್ವಾಮಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವರು ಅಪರೂಪದ ಶ್ರೇಷ್ಠ ಸಂತರಾಗಿದ್ದಾರೆ. ಸಂಸ್ಕಾರ ಪ್ರತಿ ಧರ್ಮದಲ್ಲೂ ಇದ್ದು, ಇದನ್ನು ರೂಢಿಗತ ಮಾಡಿ ಕೊಳ್ಳಬೇಕು. ಆಧ್ಯಾತ್ಮಿಕ ಸಂಪ್ರ ದಾಯಕ್ಕೆ ಭಗ ವಂತನ ಸ್ಮರಣೆ ಮುಖ್ಯವಾಗಿದೆ ಎಂದು ಹೇಳಿದರು.
ಶ್ರೀಮಂತ ಸಂಸ್ಕೃತಿಯ ಅನಾವರಣ: ಮೈಸೂರು- ಚಾಮರಾಜನಗರದ 45 ಮಠಾಧ್ಯಕ್ಷರು ಸೇರಿ ಕೊಂಡು ಇಂತಹ ಗೋಷ್ಠಿಯನ್ನು ಕಟ್ಟಿಕೊಂಡು ಇಲ್ಲಿ ತಾತ್ವಿಕ ಚಿಂತನೆಗಳನ್ನು ಬಿತ್ತುವ, ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಪ್ರತಿಭಾವಂತ ಮಕ್ಕ ಳನ್ನು ಗುರುತಿಸಿ ಅವರನ್ನು ಉತ್ತೇಜಿಸುವ ಕೆಲಸ ವನ್ನು ಮಾಡುತ್ತಿದ್ದಾರೆ. ಯುವ ಸಮೂಹ ದೇಶಭಕ್ತಿ ಯನ್ನು ಬೆಳೆಸಿಕೊಳ್ಳಬೇಕು, ನಮ್ಮ ಶ್ರೀಮಂತ ಸಂಸ್ಕೃ ತಿಯ ಅನಾವರಣ ಜಗಕ್ಕೆ ತೆರೆದಿಡಬೇಕು ಎಂದು ತಿಳಿಸಿದರು.
55 ಜನರಿಗೆ ಶಿವದೀಕ್ಷೆ-ಲಿಂಗದೀಕ್ಷೆ, 55 ವಿದ್ಯಾರ್ಥಿಗಳಿಗೆ ವಿವಿಧ ದತ್ತಿಗಳಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು. ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಎಎಸ್ಪಿ ಸುಂದರ್‌ರಾಜ್, ಮಠಾಧೀಶರು ಹಾಜರಿದ್ದರು.