Advertisement
ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ವಿಚಾರಗಳು ಹೀಗಿವೆ:– ಪೂರ್ವ ವಲಯದ 6 ವಿಧಾನಸಭಾ ಕ್ಷೇತ್ರಗಳ ಅಧಿಕಾರಿಗಳ ಸಭೆ ನಡೆಸಿದ್ದೇವೆ.
Related Articles
Advertisement
– ಇಲ್ಲಿ 10 ವೆಂಟಿಲೇಟರ್ ವ್ಯವಸ್ಥೆಯೂ ಇರಲಿದೆ.
– ಕೋವಿಡ್ ಮತ್ತು ನಾನ್ ಕೋವಿಡ್ 150 ಬೆಡ್‌ಗಳನ್ನು ಮದುವೆ ಕಲ್ಯಾಣ ಮಂಟಪದಲ್ಲಿ ಮಾಡಲು ನಿರ್ಧರಿಸಿದ್ದೇವೆ. ಒಂದು ಕ್ಷೇತ್ರಕ್ಕೆ ಪ್ರತಿ ವಾರ್ಡ್‌ಗಳಲ್ಲಿ 2 ಅಂಬ್ಯುಲೆನ್ಸ್, 10 ಟಿಟಿ ವಾಹನಗಳು ಹಾಗೂ 2 ಮೃತದೇಹ ಸಾಗಿಸುವ ವಾಹನ ನೀಡಿದ್ದೇವೆ.
– ಶಿವಾಜಿನಗರದಲ್ಲೂ ಕೋವಿಡ್-19 ಆಸ್ಪತ್ರೆಗೆ ಭೇಟಿ ನೀಡಿದ್ದೇನೆ.
– ಶಾಂತಿನಗರದ ಕೋವಿಡ್ ಕೇರ್ ಸೆಂಟರ್, ಫೀವರ್ ಸೆಂಟರ್ ಉದ್ಘಾಟನೆ ಮಾಡಿದ್ದೇವೆ.
– ಶಾಂತಿನಗರದಲ್ಲಿ 200 ಬೆಡ್‌ಗಳ ಆಸ್ಪತ್ರೆಯನ್ನು ಹೊಟೇಲ್‌ನಲ್ಲಿ ಮಾಡಲು ನಿರ್ಧರಿಸಿದ್ದೇವೆ.
– 1438 ಬೂತ್‌ಗಳು ನನ್ನ ಉಸ್ತುವಾರಿಗೆ ಬರುವ 6 ಕ್ಷೇತ್ರಗಳಲ್ಲಿ ಬರುತ್ತದೆ. ಈ ಎಲ್ಲಾ ಬೂತ್‌ಗಳನ್ನು ಕ್ರಿಯಾಶೀಲ ಮಾಡಿದ್ದೇವೆ.
– ಬೆಂಗಳೂರು ಪೂರ್ವ ವಲಯದಲ್ಲಿ 6 ಕಂಟ್ರೋಲ್ ರೂಂ ಮಾಡಿದ್ದೇವೆ.
– ಹೋಂ ಕ್ವಾರೆಂಟೈನ್‌ಗೆ ಒಳಗಾಗುವವರಿಗೆ ಮನೆಯಲ್ಲಿಯೇ ವ್ಯವಸ್ಥೆ ಮಾಡಲಾಗುತ್ತಿದೆ.
– ಶಿವಾಜಿನಗರ, ಸರ್ವಜ್ಞನಗರ, ಹೆಬ್ಬಾಳ, ಶಾಂತಿನಗರ, ಪುಲಿಕೇಶಿನಗರ ಎಲ್ಲಾ ಕಡೆಗಳಲ್ಲೂ ವ್ಯವಸ್ಥೆ ಮಾಡಲಾಗಿದೆ.
– ನಾಳೆ ಬೆಳಿಗ್ಗೆ 11 ಘಂಟೆಗೆ ಎಲ್ಲಾ ಸಚಿವರನ್ನು ಸಭೆ ಕರೆದಿದ್ದಾರೆ. ನಗರದಲ್ಲಿನ ಎಲ್ಲಾ ಮಂತ್ರಿಗಳು ಶ್ರಮ ವಹಿಸಿದ್ದಾರೆ.
– ಬೆಂಗಳೂರು ಪೂರ್ವ ವಲಯದ ಕಂಟೈನ್‌ಮೆಂಟ್ ಜೋನ್‌ಗಳ ಮನೆಗಳಿಗೆ ರೇಷನ್ ಕಿಟ್ ಕೊಟ್ಟಿದ್ದೇವೆ.