Advertisement

ಟ್ರಾಫಿಕ್‌ ಪೊಲೀಸ್‌ ಆದ ಸಚಿವ ಖಾದರ್‌!; ವಿಡಿಯೋ ವೈರಲ್‌ 

06:42 AM Jan 13, 2019 | Team Udayavani |

ಮಂಗಳೂರು: ಭಾರೀ ಟ್ರಾಫಿಕ್‌ ಸಮಸ್ಯೆ ಕಂಡು ಸಚಿವ ಯು.ಟಿ.ಖಾದರ್‌ ಅವರು ಟ್ರಾಫಿಕ್‌ ಪೊಲೀಸ್‌ ರೀತಿಯಲ್ಲಿ  ಕೆಲಸ ನಿರ್ವಹಿಸಿ ಸುದ್ದಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು ಸಚಿವರ ಸರಳತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

Advertisement

ಶನಿವಾರ ಮಧ್ಯಾಹ್ನ ಪಂಪ್‌ವೆಲ್‌ ವೃತ್ತದಲ್ಲಿ  ಟ್ರಾಫಿಕ್‌ ದಟ್ಟಣೆಯಲ್ಲಿ 10 ನಿಮಿಷಕ್ಕೂ ಹೆಚ್ಚು ಕಾಲ ಸಿಲುಕಿ ಸ್ವತಃ ಖಾದರ್‌ ಅವರೇ ಪರದಾಡಬೇಕಾಯಿತು. ಕೂಡಲೇ ಕಾರಿನಿಂದ ಇಳಿದ ಸಚಿವರು ವಾಹನಗಳು ಸುಗಮವಾಗಿ ಸಾಗಲು ಅನುಕೂಲ ಮಾಡಿಕೊಟ್ಟರು. 

ಪಂಪ್‌ವೆಲ್‌ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದ್ದು, ಸಂಚಾರದಟ್ಟಣೆಯಿಂದಾಗಿ ವಾಹನ ಸವಾರರು ದಿನ ನಿತ್ಯ ಪರದಾಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next