Advertisement

ಮಂಡಳಿ ಪರೀಕ್ಷೆಗಳ ಕುರಿತಂತೆ ಅತಿ ಶೀಘ್ರದಲ್ಲಿಯೇ ತೀರ್ಮಾನ: ಸಚಿವ ಎಸ್.ಸುರೇಶ್ ಕುಮಾರ್

06:50 PM Jun 02, 2021 | Team Udayavani |

ಬೆಂಗಳೂರು : ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳ ಕುರಿತಂತೆ ಆದಷ್ಟು ಶೀಘ್ರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ‌ ಎಂದು ಸಚಿವ ಸುರೇಶ್‌ಕುಮಾರ್‌ ಹೇಳಿದ್ದಾರೆ.

Advertisement

ಈ‌ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಚಿವರು ಪರೀಕ್ಷೆಗಳ ಬಗ್ಗೆ ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ಪೋಷಕ ವರ್ಗಗಳ‌‌ ಜೊತೆ ವ್ಯಾಪಕ ಸಮಾಲೋಚನಾ ಪ್ರಕ್ರಿಯೆ ಚಾಲ್ತಿಯಲ್ಲಿರುವ ಕಾರಣ, ಮಕ್ಕಳ ಆರೋಗ್ಯ ಹಾಗೂ ಭವಿಷ್ಯದ ಹಿತದೃಷ್ಟಿಯಿಂದ ಸೂಕ್ತ‌ ನಿರ್ಧಾರವನ್ನು ಬರುವ ಕೆಲವು ದಿನಗಳಲ್ಲಿ  ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next