Advertisement

ಆಪ್ತ ಸಹಾಯಕನಿಗೆ ಕೋವಿಡ್ ಪಾಸಿಟಿವ್: ಮೂರನೇ ಬಾರಿ ಸಚಿವ ಸುಧಾಕರ್ ಕ್ವಾರಂಟೈನ್ ಗೆ!

03:47 PM Jul 28, 2020 | keerthan |

ಬೆಂಗಳೂರು: ಈ ಹಿಂದೆ ಎರಡು ಬಾರಿ ಕ್ವಾರಂಟೈನ್ ಗೆ ಒಳಗಾಗಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಈಗ ಮತ್ತೆ ಕ್ವಾರಂಟೈನ್ ಗೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಕಾರಣ ಸಚಿವರ ಆಪ್ತ ಸಹಾಯಕನಿಗೆ ಸೋಂಕು ತಾಗಿರುವುದು ದೃಢವಾಗಿದೆ.

Advertisement

ಸಚಿವ ಸುಧಾಕರ್ ಆಪ್ತ ಸಹಾಯಕನಿಗೆ ಸೋಂಕು ದೃಢವಾದ ಹಿನ್ನಲೆಯಲ್ಲಿ ವಿಧಾನಸೌಧದ ಮೂರನೇ ಮಹಡಿಯ ಸುಧಾಕರ್ ಕಚೇರಿ 339 ಕೊಠಡಿಯನ್ನು ಸೀಲ್ ಡೌನ್ ಮಾಡಲಾಗಿದೆ. ಆಪ್ತ ಸಿಬ್ಬಂದಿ ಶಾಖೆ ಇದ್ದ 339-A ಕೊಠಡಿಯನ್ನು ಕೂಡಾ ಸೀಲ್ ಡೌನ್ ಮಾಡಲಾಗಿದೆ.

ಈ ಹಿಂದೆ ಆಪ್ತ ವಲಯದಲ್ಲಿ ಕೋವಿಡ್ ಪ್ರಕರಣ ಕಂಡು ಬಂದ ಹಿನ್ನಲೆಯಲ್ಲಿ ಸಚಿವರು ಕ್ವಾರಂಟೈನ್ ಆಗಿದ್ದರು. ನಂತರ ಸುಧಾಕರ್ ಅವರ ತಂದೆ, ಪತ್ನಿ, ಮಗಳು ಸೇರಿದಂತೆ ಕುಟುಂಬದ ಸದಸ್ಯರಿಗೆ ಕೋವಿಡ್ ಪಾಸಿಟಿವ್ ಆದ ಕಾರಣ ಎರಡನೇ ಬಾರಿ ಕ್ವಾರಂಟೈನ್ ಆಗಿದ್ದರು. ಈಗ ಮೂರನೇ ಬಾರಿಗೆ ಸಚಿವರು ಕ್ವಾರಂಟೈನ್ ಆಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next