Advertisement

ಮೇ ಮೊದಲ ವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು: ಲಾಕ್ ಡೌನ್ ಸುಳಿವು ನೀಡಿದ ಸುಧಾಕರ್

02:20 PM Apr 11, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಆರೋಗ್ಯ ಸಚಿವ ಕೆ.ಸುಧಾಕರ್ ಇಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ತಜ್ಞರ ಜೊತೆ ಸಭೆ ನಡೆಸಿದರು.

Advertisement

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ವಿಚಾರವಾಗಿ ತಜ್ಞರು ಅಭಿಪ್ರಾಯ ಸಲ್ಲಿಸಿದ್ದಾರೆ. ಅವರು ವರದಿ ಕೊಡುವಂತೆ ಹೇಳಿದ್ದೇನೆ. ವರದಿಯನ್ನು ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಬಳಿಕ ಕ್ರಮ ಕೈಗೊಳ್ಳುತ್ತೇವೆ. ಅಧಿಕೃತ ವರದಿ ಬರುವವರೆಗೂ ನಾನು ಹೇಳುವುದು ತಪ್ಪಾಗಲಿದೆ ಎಂದರು.

ಎರಡನೇ ಅಲೆ ಹೆಚ್ಚಾಗುತ್ತಿದ್ದು, ಮುಂದಿನ ದಿನದಲ್ಲಿ ಹೇಗೆ ನಿಯಂತ್ರಣ ಮಾಡಬೇಕು. ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆಯಾಗಿದೆ. ಮುಂದೆ ಸೋಂಕಿತರ ಸಂಖ್ಯೆ ಎಷ್ಟು ಹೆಚ್ಚಾಗಬಹುದು ಎಂದು ತಾಂತ್ರಿಕ ಸಲಹಾ ಸಮಿತಿ ಪರಿಣಿತರು ಮಾಹಿತಿ ನೀಡಿದ್ದಾರೆ. ಆರ್ಥಿಕ ಚಟುವಟಿಕೆಗೆ ತೊಂದರೆಯಾಗುವ ಸಲಹೆಗಳನ್ನು ನೀಡುವುದಿಲ್ಲ. ಗುಂಪು ಸೇರುವ ಕಾರ್ಯಕ್ರಮಕ್ಕೆ ಕಡಿವಾಣ ಹಾಕಬೇಕು. ಅನಾವಶ್ಯಕವಾಗಿ ಜನ ಸೇರುವ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕುವಂತೆ ಸೂಚನೆ ನೀಡಿದ್ದಾರೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ:ಕೆಲಸಕ್ಕೆ ಬಾರದಿದ್ದಲ್ಲಿ ಸಂಬಳ ಕಡಿತ, ಶಿಸ್ತು ಕ್ರಮ: ಸಿಎಂ ಯಡಿಯೂರಪ್ಪ ಎಚ್ಚರಿಕೆ

80-120 ದಿನ ಅಲೆ ಇರಲಿದೆ. ಮೇ ತಿಂಗಳಲ್ಲಿ ಹೆಚ್ಚು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಸೋಂಕು ಮೇ ಮೊದಲ ವಾರದಲ್ಲಿ ಹೆಚ್ಚಿದ್ದು, ಕೊನೆಯಲ್ಲಿ ಕಡಿಮೆಯಾಗಬಹುದು. ಮನೆಯಲ್ಲಿ ಐಸೋಲೇಟ್ ಆಗುವವರ ಮೇಲೆ ನಿಗಾ ಇಡಬೇಕಾಗಿದೆ ಎಂದರು.

Advertisement

ಬೆಂಗಳೂರಿನಲ್ಲಿ ಯುಗಾದಿ ಹಬ್ಬ ಬರುತ್ತಿದೆ. ನೌಕರಿಗೆ ಬಂದವರು ಹೆಚ್ಚಿದ್ದು, ಮನೆಗೆ ಹೋಗುವ ಸಂದರ್ಭ. ಹೋಗುವಾಗ ಸೋಂಕು ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ. ಮೊದಲ ಅಲೆಯಲ್ಲೂ ಇದೇ ರೀತಿ ಆಗಿತ್ತು. ಅಪಾಯ ಇರುವುದರಿಂದ ಸರ್ಕಾರ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ. ಇದೆಲ್ಲವೂ ವೈಜ್ಞಾನಿಕ ರೀತಿಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಹೆಚ್ಚು ಮೆಡಿಸಿನ್ ಖರೀದಿಗೆ ಸೂಚಿಸಿದ್ದು, ಇದಕ್ಕೆ ಒಪ್ಪಿದ್ದೇವೆ. ಟೆಲಿಬೈಸಿಯು ನಾವೇ ಮೊದಲು ಆರಂಭಿಸಿದ್ದೇವೆ. ಕೊಲಂಬಿಯಾ ಏಷ್ಯಾ, ಮಣಿಪಾಲ್ ಆಸ್ಪತ್ರೆಯಲ್ಲಿ ಉಚಿತ ಸೇವೆ ನೀಡಿದ್ದಾರೆ. ಇನ್ನು ಮುಂದುವರೆಸಲು ಮನವಿ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ಮಾರ್ಗಸೂಚಿ ಪಾಲಿಸಲು ಚುನಾವಣಾ ಆಯೋಗ ಕಟ್ಟಪ್ಪಣೆ

ಅನ್ಯ ರಾಜ್ಯದಿಂದ ಬರುವವರ ರಿಪೋರ್ಟ್ ನೋಡಿಕೊಂಡೇ ಬಿಡುವಂತೆ ಸೂಚಿಸಿದ್ದಾರೆ. ಅವರಿಗೆ ವರದಿ ರೀತಿಯಲ್ಲಿ ನೀಡುವಂತೆ ಸೂಚಿಸಿದ್ದೇನೆ. ವರದಿಯನ್ನು ಸಿಎಂ ಮುಂದೆ ಇಟ್ಟು, ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇವೆ ಎಂದು ಸುಧಾಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next