Advertisement
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ತಾನು ವಿರೋಧ ಪಕ್ಷದ ನಾಯಕ ಎಂದು ತೋರಿಸಿಕೊಳ್ಳಲು ಟ್ವೀಟ್ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ನಿಂದ ನಿದ್ದೆಯಿಂದ ಎದ್ದೇಳು ಸರ್ಕಾರ ಅಭಿಯಾನ ವಿಚಾರಕ್ಕೆ ಉತ್ತರಿಸಿದ ಅವರು, ನಿದ್ದೆಯಲ್ಲಿರುವವರು ನಾವಲ್ಲ. ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ದಿನಚರಿ ಜನರ ಮುಂದಿಡೋಣ. ಐದು ವರ್ಷದಲ್ಲಿ ಸಿದ್ದರಾಮಯ್ಯ ಮಾಡಿದ್ದು ಏನು? ಯಡಿಯೂರಪ್ಪ ಕೋವಿಡ್ ಕಾಲದಲ್ಲಿ ಮಾಡುತ್ತಿರುವುದು ಏನು ಗೊತ್ತಾಗುತ್ತದೆ. ಯಾರೋ ಬಂದು ತಿವಿದಾಗ ಟ್ವೀಟ್ ಮಾಡುವುದು ಅವರ ಕೆಲಸವಾಗಿದೆ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ನಾನು ಕೊಲಂಬೋಗೆ ಹೋಗಿದ್ದು ಹೌದು, ಇದರಲ್ಲಿ ಬಚ್ಚಿಡುವುದು ಏನೇನೂ ಇಲ್ಲ: ಎಚ್ ಡಿಕೆ
Related Articles
Advertisement
ಶಾಸಕ ಜಮೀರ್ ಅಹಮದ್ ಗೆ ಪಶ್ಚಾತಾಪ ಕಾಡುತ್ತಿರಬಹುದು. ತಪ್ಪು ಮಾಡದಿದ್ದರೆ ಅಲ್ಪಸಂಖ್ಯಾತರ ಹೆಸರು ಏಕೆ ಬಳಸಬೇಕು. ಈ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತ ಎಲ್ಲರಿಗೂ ಒಂದೇ ಕಾನೂನು. ಅವರ ಮೇಲಿನ ಆರೋಪ ಸುಳ್ಳು ಎಂದು ಹೇಳಲಿ. ಅದು ಬಿಟ್ಟು ಪ್ರಚಾರಕ್ಕಾಗಿ ಏನೇನೋ ಹೇಳಿಕೆ ನೀಡಬಾರದು ಎಂದರು.