Advertisement

ಸೆ.13ರಂದು ಗಜಪಡೆ ಆಗಮನ, ಅ.7ಕ್ಕೆ ದಸರಾ ಉದ್ಘಾಟನೆ

09:38 PM Sep 08, 2021 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಯ ಪಯಣ ಸೆ.13ರಂದು ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ನಡೆಯಲಿದ್ದು, ಈ ಬಾರಿಯ ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆಯಲಿದೆ.

Advertisement

ಬುಧವಾರ ದಸರಾ ಆಚರಣೆ ಸಂಬಂಧ ಅರಮನೆ ಮಂಡಳಿ ಸಭಾಂಗಣದಲ್ಲಿ ನಡೆದ ದಸರಾ ಕಾರ್ಯಕಾರಿ ಸಮಿತಿ ಸಭೆ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಕೋವಿಡ್‌ ಹಿನ್ನೆಲೆ ಕಳೆದ ಬಾರಿಯಂತೆ ಈ ಬಾರಿಯೂ ಅರಮನೆಗೆ ಸೀಮಿತವಾಗುವಂತೆ ಸರಳ, ಸಾಂಪ್ರದಾಯಿಕ ದಸರಾ ಆಚರಿಸಲಾಗುವುದು ಎಂದರು.

ದಸರಾದಲ್ಲಿ ಪಾಲ್ಗೊಳ್ಳುವ ಗಜಪಡೆಯನ್ನು ವೀರನಹೊಸಹಳ್ಳಿಯಲ್ಲಿ ಸೆ.13ರಂದು ಬೆಳಗ್ಗೆ 9.30ರಿಂದ 10.20ರೊಳಗೆ ಅಭಿಮನ್ಯು ನೇತೃತ್ವದ 8 ಆನೆಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುತ್ತದೆ. ಸೆ.16ರಂದು ಅರಣ್ಯ ಭವನಕ್ಕೆ ಗಜಪಡೆ ಆಗಮಿಸಲಿದ್ದು, ಸೆ.17ರಂದು ಅರಮನೆಗೆ ಸ್ವಾಗತಿಸಲಾಗುತ್ತದೆ. ಜಂಬೂ ಸವಾರಿ ಮುಗಿದ ಬಳಿಕ ಅ.17ರಂದು ಗಜಪಡೆಗೆ ಬೀಳ್ಕೊಡುಗೆ ನೀಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:‘ಮೌಲ್ವಿಗಳು ನಮಗಿಂತ ಶ್ರೇಷ್ಠರು| PhD,MA ಗಳಿಗೆ ಬೆಲೆ ಇಲ್ಲ’ಎಂದ ತಾಲಿಬಾನ್ ಶಿಕ್ಷಣ ಸಚಿವ 

ಅ.7ಕ್ಕೆ ದಸರಾ ಉದ್ಘಾಟನೆ: ಈ ಬಾರಿಯ ದಸರಾ ಮಹೋತ್ಸವ ಅ.7ರಂದು ಚಾಮುಂಡಿ ಬೆಟ್ಟದಲ್ಲಿ 8.15ರಿಂದ 8.45ರಲ್ಲಿ ಸಲ್ಲುವ ಶುಭ ಲಗ್ನದಲ್ಲಿ ಉದ್ಘಾಟನೆಗೊಳ್ಳಲಿದೆ. ಉದ್ಘಾಟಕರು ಯಾರು ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿದೆ. ಅ.15ರ ಸಂಜೆ 4.36 ರಿಂದ 4.46ರಲ್ಲಿ ಸಲ್ಲುವ ಶುಭ ಲಗ್ನದಲ್ಲಿ ನಂದಿ ಪೂಜೆ, ಸಂಜೆ 5 ರಿಂದ 5.36ಕ್ಕೆ ಜಂಬೂ ಸವಾರಿ ಮೆರವಣಿಗೆ ಅರಮನೆ ಆವರಣದಲ್ಲಿಯೇ ನಡೆಯಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next