Advertisement
ಶನಿವಾರ ಮಲ್ಪೆ ಮೀನುಗಾರಿಕೆ ಬಂದರಿಗೆ ಭೇಟಿ ನೀಡಿದ ಸಚಿವರನ್ನು ಭೇಟಿಯಾದ ಮೀನುಗಾರರು ಈ ಬಗ್ಗೆ ಮನವಿ ಮಾಡಿ ಆಗ್ರಹಿಸಿದರು.
ಈ ಬಾರಿ ಋತು ಆರಂಭದಿಂದಲೂ ಪ್ರಾಕೃತಿಕ ವೈಪರೀತ್ಯದಿಂದಾಗಿ ಸರಿಯಾಗಿ ಮೀನುಗಾರಿಕೆ ನಡೆಯದೆ ಶೇ. 90ರಷ್ಟು ಬೋಟುಗಳು ನಷ್ಟದಲ್ಲಿವೆ. ಲಾಕ್‌ಡೌನ್ ಮುಗಿದ ಬಳಿಕ ಒಂದು ವೇಳೆ ಯಾಂತ್ರಿಕ ಮೀನುಗಾರಿಕೆಗೆ ಪೂರಕವಾದ ಅವಕಾಶ ದೊರೆತಲ್ಲಿ ಜೂ. 30ರ ವರೆಗೆ ಹೆಚ್ಚುವರಿ ಅವಧಿ ಯನ್ನು ನೀಡಬೇಕು ಮತ್ತು ಈಗಾಗಲೇ ಬೋಟಿನಲ್ಲಿ ದುಡಿಯುವ ಉತ್ತರ ಕನ್ನಡದ ಮೀನುಗಾರ ಕಾರ್ಮಿಕರು ಊರಿಗೆ ಹೋಗಿದ್ದು ಅವರು ಬಂದರಿಗೆ ವಾಪಸಾಗಲು ಸೂಕ್ತ ವ್ಯವಸ್ಥೆಯನ್ನು ಮಾಡಬೇಕು ಎಂದು ಮನವಿ ಮಾಡಲಾಯಿತು. ಮೀನುಗಾರಿಕೆ ಉಪ ನಿರ್ದೇಶಕ ಗಣೇಶ್, ಸಹಾಯಕ ನಿರ್ದೇಶಕರಾದ ಶಿವ ಕುಮಾರ್, ಕಿರಣ್ ಕುಮಾರ್, ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ, ಕಾರ್ಯದರ್ಶಿ ಸುಭಾಸ್ ಮೆಂಡನ್, ರಮೇಶ್ ಕೋಟ್ಯಾನ್, ರಾಮಚಂದ್ರ ಕುಂದರ್, ಸಾಧು ಸಾಲ್ಯಾನ್, ರತ್ನಾಕರ ಸಾಲ್ಯಾನ್ ಸುರೇಶ್ ಕುಂದರ್, ಗೋಪಾಲ ಆರ್.ಕೆ., ಪ್ರಕಾಶ್ ಬಂಗೇರ ಉಪಸ್ಥಿತ ರಿದ್ದರು.