ಬೆಂಗಳೂರು: ಎಲ್ಲರಿಗೂ ಸಮಾನ ಆದ್ಯತೆ ನೀಡುವ ಹಾಗೂ ಎಲ್ಲಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಅತ್ಯತ್ತಮ ಆಯವ್ಯಯವನ್ನು ಕೇಂದ್ರ ಸರ್ಕಾರ ಮಂಡಿಸಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಬಜೆಟ್ ಬಗ್ಗೆ ಮಾಹಿತಿ ನೀಡಿದ ಅವರು, ರಾಷ್ಟ್ರೀಯ ಹೆದ್ದಾರಿಗೆ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಲಾಗಿದೆ. ರಾಜ್ಯದ 33 ರಾಷ್ಟ್ರೀಯ ಹೆದ್ದಾರಿಗೆ ಅಡಿಗಲ್ಲು ಹಾಕಲಾಗಿದೆ. ಲಕ್ಷ ಕೋಟಿಗೂ ಅಧಿಕ ಅನುದಾನವನ್ನು ಮೂಲಸೌಕರ್ಯಕ್ಕೆ ಮೀಸಲಿಡಲಾಗಿದೆ. ಮೆಟ್ರೋ ಕಾಮಗಾರಿಗೆ 14 ಸಾವಿರಕ್ಕೂ ಅಧಿಕ ಕೋಟಿ ರೂ. ಮೀಸಲಿಡಲಾಗಿದೆ ಎಂದರು.
ರೈಲ್ವೆ ಉನ್ನತೀಕರಣಕ್ಕೂ ವಿಶೇಷ ಅನುದಾನ ನೀಡಲಾಗಿದೆ. ಸಣ್ಣ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೂ ಕ್ರಮ ತೆಗೆದುಕೊಂಡು, ಉದ್ಯೋಗಾವಕಾಶ ಸೃಷ್ಟಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಬೆಂಗಳೂರು- ಮಂಗಳೂರು ಸುಗಮ ಸಾರಿಗೆಗೆ ಸಿರಾಡಿ ಘಾಟಿನಲ್ಲಿ ಸುರಂಗ ನಿರ್ಮಾಣಕ್ಕೆ 10 ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ನಿಮ್ಮಲ್ಲಿರುವ 50, 200 ರೂ. ನೋಟುಗಳು ನಕಲಿ ಇರಬಹುದು ಪರಿಶೀಲಿಸಿಕೊಳ್ಳಿ : ಆರ್ ಬಿ ಐ
ಕೃಷಿಗೂ ವಿಶೇಷ ಆದ್ಯತೆ ನೀಡಲಾಗಿದೆ. ಹಕ್ಕು ಪತ್ರ ನೀಡುವುದು, ಹಳ್ಳಿಗಳಲ್ಲಿ ಸೌಲಭ್ಯ ಒದಗಿಸಲು ಕ್ರಮ ಆಗಿದೆ. ಕೃಷಿ ಸಾಲ ವಿತರಣೆಗೆ ಅನುದಾನ ಮೀಸಲಿಡಲಾಗಿದೆ. ಹೈನುಗಾರಿಕೆ ಮೀನುಗಾರಿಕೆಗೂ ಅನುದಾನ ನೀಡಲಾಗಿದೆ. ಹೀಗೆ ಎಪಿಎಂಸಿ ಬಲವರ್ಧನೆ, ಕೃಷಿ ಮೂಲಸೌಕರ್ಯ ನಿಧಿ ಬಳಕೆ, ಕೋಲ್ಡ್ ಸ್ಟೋರೇಜ್ ನಿರ್ಮಾಣ ಸೇರಿದಂತೆ ರೈತರಿಗೆ ಅನುಕೂಲ ಆಗುವಂತ ಅನೇಕ ಕ್ರಮ ಬಜೆಟ್ನಲ್ಲಿ ಆಗಿದೆ. ನರೇಗಾದಡಿ ನಗರ ವಲಸೆ ತಪ್ಪಿಸಲು 14ನೇ ಹಣಕಾಸು ಯೋಜನೆಯಡಿ ಪಂಚಾಯತಿಗೆ ನೇರ ಅನುದಾನ ನೀಡುವ ವ್ಯವಸ್ಥೆ ಜಾರಿಗೆ ಮಾಡಿ, ನರೇಗಾ ಯೋಜನೆಗೆ 73 ಸಾವಿರ ಕೋಟಿ ಮೀಸಲಿಡಲಾಗಿದೆ. ಕಾರ್ಮಿಕರಿಗೆ ವಿವಿಧ ಸೌಲಭ್ಯ, ವಿಮಾ ಭದ್ರತೆ ಒದಗಿಸಲು ಸೂಕ್ತ ಕಾನೂನು ಮಾಡಲಾಗಿದೆ ಎಂದರು.
ಇದನ್ನೂ ಓದಿ:ವಿಚಾರಕ್ಕಾಗಿ ನನ್ನ ತಂದೆ, ಅಜ್ಜಿ ಹತ್ಯೆಯಾದ ಬಗ್ಗೆ ನನಗೆ ಹೆಮ್ಮೆಯಿದೆ: ರಾಹುಲ್ ಗಾಂಧಿ
ಶುದ್ಧ ಕುಡಿಯುವ ನೀರು, ಬಂದರುಗಳ ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆಧ್ಯತೆ, ಕೋವಿಡ್ ಲಸಿಕೆ ವಿತರಣೆಗೆ ವಿಶೇಷ ಅನುದಾನ ಸೇರಿದಂತೆ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ದಿ ಅನುದಾನವನ್ನು ಕೇಂದ್ರ ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದು ಸಚಿವ ಸೋಮಣ್ಣ ಹೇಳಿದರು.