ಬಳ್ಳಾರಿ : ಸಚಿವ ಶ್ರೀರಾಮುಲು ಅವರು ಇದೇ ಮೊದಲ ಬಾರಿಗೆ ಶನಿವಾರ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.
ಶ್ರೀರಾಮುಲು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಬಜೆಟ್ ಬಗ್ಗೆ ಸುದೀರ್ಘ ವಿವರಣೆ ನೀಡಲು ಮುಂದಾದಾಗ,
ಪ್ರಸಕ್ತ ವಿಚಾರದ ಬಗ್ಗೆ ಮಾತನಾಡಿ ಸುದೀರ್ಘ ಮಾತುಕತೆ ಬೇಡ ಎಂದು ಪತ್ರಕರ್ತರು ಹೇಳಿದ್ದಾರೆ. ಈ ವೇಳೆ ಆಕ್ರೋಶಿತರಾದ ಶ್ರೀರಾಮುಲು. ನೀವೆಲ್ಲ ಬುದ್ದಿವಂತರು ಇರಬಹುದು. ಆದ್ರೇ ತಾಳ್ಮೆ ಇರಬೇಕಲ್ವಾ..? ಕನಿಷ್ಠ ನಾವು ಹೇಳೋದನ್ನಾದ್ರೂ ಕೇಳಬೇಕಲ್ವಾ ? ನಮ್ಮನ್ನು ಡಿಕ್ಟೇಟ್ ಮಾಡ್ತೀರಾ? ಇದು ನಮ್ಮ ಪಕ್ಷದ ಕಾರ್ಯಕ್ರಮ ಅದನ್ನು ನಾನು ಹೇಳಬೇಕು.ಕೇಳೋ ತಾಳ್ಮೆ ಇಲ್ವಾ..? ಎಂದು ಪ್ರಶ್ನಿಸಿದರು.
ನಾನೊಬ್ಬ ಮಂತ್ರಿ ನನಗೆ ಕನಿಷ್ಠ ಗೌರವ ಕೋಡೋದಿಲ್ವಾ.? ಪ್ರತಿಬಾರಿಯೂ ನನಗೆ ಹೀಗೆ ಅಡ್ಡಿಪಡಿಸುತ್ತೀರಿ ಎಂದು ಇದೇ ಮೊದಲ ಬಾರಿಗೆ ಮಾಧ್ಯಮಗಳ ವಿರುದ್ಧ ರೋಷಾವೇಷ ಮತ್ತು ಅಸಮಾಧಾನ ವ್ಯಕ್ತಪಡಿಸಿದರು.
ವಾಲ್ಮೀಕಿ ಸಮುದಾಯಕ್ಕೆ 7.5.ಮೀಸಲಾತಿ ನೀಡಬೇಕೆಂದು ಮೊದಲು ನಾನೇ ಪ್ರಾರಂಭ ಮಾಡಿದ್ದೇ, ನನ್ನ ಮಾತಿಗೆ ಬದ್ದನಿದ್ದೇನೆ. ನಾಗಮೋಹನದಾಸ್ ವರದಿ ಕೊಟ್ಟಿದ್ದಾರೆ.ಪಂಚಮಸಾಲಿ ಮತ್ತು ಕುರುಬರು ಕೂಡ ಮೀಸಲಾತಿ ಹೋರಾಟ ಮಾಡ್ತಿದ್ದಾರೆ.ಆದ್ರೇ ನಮ್ಮ ಸರ್ಕಾರದ ಅವಧಿ ಮುಗಿಯೋದ್ರೊಳಗೆ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಕೊಡುತ್ತೇವೆ ಎಂದರು.
ಉಪವಾಸ ಕೂಡದಂತೆ ನಮ್ಮ ಸ್ವಾಮೀಜಿಗೆ ಮನವಿ ಮಾಡಿದ್ದೇವೆ ಮುಷ್ಕರ ಮಾಡಬೇಡಿ ಸರ್ಕಾರಕ್ಕೆ ಮುಜುಗರ ಮಾಡಬೇಡಿ ಎಂದು ಮನವಿ ಮಾಡಿದ್ದೇನೆ. ಸ್ವಾಮೀಜಿಯವರ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದೇನೆ ಸರ್ಕಾರ ಅವಧಿ ಮುಗಿಯೋದ್ರೊ ಳಗೆ ಮೀಸಲಾತಿ ಸಮಸ್ಯೆ ಬಗೆಹರಿಯುತ್ತದೆ ಎಂದರು.
ಹಿಜಾಬ್ ವಿವಾದದ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ, ಪ್ರಕರಣ ಕೋರ್ಟ್ ನಲ್ಲಿದೆ ಎಂದರು.