Advertisement

ಯಲ್ಲಾಪುರದಲ್ಲಿ 15 ಸಾವಿರ ಲೀ. ಆಕ್ಸಿಜನ್ ಉತ್ಪಾದನ ಘಟಕದ ಕೆಲಸ ನಾಳೆ ಆರಂಭ:ಸಚಿವ ಹೆಬ್ಬಾರ್

08:52 PM May 06, 2021 | Team Udayavani |

ಕಾರವಾರ : ಯಲ್ಲಾಪುರದಲ್ಲಿ 15 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದಿಸುವ ಘಟಕದ ಕೆಲಸ ನಾಳೆ ಅಥವಾ ನಾಡಿದ್ದು ಪ್ರಾರಂಭವಾಗಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ  ಹೆಬ್ಬಾರ್ ಹೇಳಿದರು‌ .

Advertisement

ಕಾರವಾರ ಜಿಲ್ಲಾಸ್ಪತ್ರೆ, ಶಿರಸಿ, ಭಟ್ಕಳದಲ್ಲಿ ಒಂದೂವರೆ ತಿಂಗಳಲ್ಲಿ ಬೃಹತ್ ಆಕ್ಸಿಜನ್ ಘಟಕ ಪ್ರಾರಂಭವಾಗಲಿದೆ ಎಂದು ಸಚಿವ ಹೆಬ್ಬಾರ್ ನುಡಿದರು.

ಈವರೆಗೆ ಅಗತ್ಯ ವಸ್ತುಗಳ ಖರೀದಿಗೆ 6-12 ಸಮಯ‌ ನಿಗದಿಪಡಿಸಿದ್ದು, ಜನಸಾಂದ್ರತೆ ಹೆಚ್ಚಿದೆ. ಹಾಗಾಗಿ ಮೊದಲಿನಂತೆ 6-10ಗಂಟೆಯವರೆಗೆ ಮಾತ್ರ ಜನರಿಗೆ ಅಗತ್ಯ ವಸ್ತುಗಳ‌ ಖರೀದಿಗೆ ಅವಕಾಶ ನೀಡಲಾಗುವುದು. ಜನರು ಸಹಕಾರ  ಮಾಡಿಲ್ಲಂದ್ರೆ ಅನಿವಾರ್ಯವಾಗಿ ಲಾಕ್‌ಡೌನ್ ಮಾಡಬೇಕಾಗುತ್ತೆ ಎಂದು ಸಚಿವರು ಹೇಳಿದರು.‌

ಇದನ್ನೂ ಓದಿ : ದಾವಣಗೆರೆ: ಸೂಕ್ತ ಸಮಯಕ್ಕೆ ಸಿಗದ ಬೆಡ್ : ಆಸ್ಪತ್ರೆ ಆವರಣದಲ್ಲೇ ಮೃತಪಟ್ಟ ವ್ಯಕ್ತಿ

ವಾಕ್ಸಿಜನ್ ಸದ್ಯಕ್ಕೆ 18 ವರ್ಷ ಹಾಗೂ ಮೇಲಿನವರಿಗೆ ಕೊಡಲಾಗುತ್ತಿಲ್ಲ. ಈಗಾಗಲೇ ಡೋಸ್ ಪಡೆದುಕೊಂಡವರಿಗೆ ಸೆಕೆಂಡ್ ಡೋಸ್‌ ನೀಡಲು ನಮ್ಮಲ್ಲಿದ್ದು, ಕೊಡಲಾಗುತ್ತಿದೆ.  10-15 ದಿನದಲ್ಲಿ ವಾಕ್ಸಿನೇಷನ್ ಬರುತ್ತೆ, ಜನರು ಸಹಕಾರವಿರಲಿ ಗರ್ಭಿಣಿಯರಿಗೆ ಡೆಲಿವಾರಿ ಆಗೋ ಎರಡು ವಾರಗಳ‌ ಮೊದಲು ಆರ್‌ಟಿ‌ಪಿಸಿಆರ್ ಟೆಸ್ಟ್ ಅನಿವಾರ್ಯ .ಜಿಲ್ಲೆಯಲ್ಲಿ124 ಡಾಕ್ಟರ್ಸ್ ಡ್ಯೂಟಿ ಪ್ರಾರಂಭಿಸಲಿದ್ದು, ನಕಲಿ ವೈದ್ಯರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳಲಾಗುತ್ತಿದೆ ಎಂದರು .

Advertisement

ಲಾಕ್‌ಡೌನ್ ಮಾಡಿದ್ರೆ ಕಾರ್ಮಿಕರ ಸ್ಥಿತಿ, ರೈತರ, ರಾಜ್ಯದ ಹಣಕಾಸಿನ ಸ್ಥಿತಿ ಹೇಗಿರುತ್ತೆ ಅಂತಾ ಗೊತ್ತಿದೆ ಹಾಗಾಗಿ  ಸದ್ಯಕ್ಕೆ ಲಾಕ್‌ಡೌನ್ ಮಾಡೋ ಯಾವುದೇ ನಿರ್ಧಾರ ಕೈಗೊಳ್ಳಲ್ಲ.ಹಣಕಾಸಿನ ಮೂಲಕ ಸರಕಾರಕ್ಕೆ ಸಹಾಯ ಮಾಡಲು ಇಚ್ಛೆಯಿದ್ದರೆ ಜಿಲ್ಲಾಧಿಕಾರಿಗೆ  ನೀಡಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next