Advertisement

ವಜಾಗೊಂಡ ಸಾರಿಗೆ ನೌಕರರು‌ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಲಿ: ಸಚಿವ ಶಿವರಾಮ‌ ಹೆಬ್ಬಾರ್

02:45 PM Apr 11, 2021 | Team Udayavani |

ಕಲಬುರಗಿ:‌ ಮುಷ್ಕರ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಸೇವೆಯಿಂದ ವಜಾಗೊಂಡ ಮುಷ್ಕರ ನಿತರ ನೌಕರರು ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಲಿ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತಿ ಕಾರ್ಮಿಕರ ಹಿತಕಾಯಲು ಇಲಾಖೆ ಬದ್ಧವಾಗಿದೆ. ಆದರೆ, ಸಾರಿಗೆ ನೌಕರರ ಮುಷ್ಕರವೇ ಕಾನೂನು ಬಾಹಿರವಾಗಿದೆ. ಅವರು ರಾಜಕೀಯ ಪ್ರೇರಿತವಾಗಿ ಮುಷ್ಕರ ನಡೆಸುತ್ತಿದ್ದಾರೆ. ನಾವು ಮಾತುಕತೆಗೆ ಕರೆದರೂ ಬಂದಿಲ್ಲ ಎಂದರು.

ಇದನ್ನೂ ಓದಿ:ಮೇ ಮೊದಲ ವಾರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು: ಲಾಕ್ ಡೌನ್ ಸುಳಿವು ನೀಡಿದ ಸುಧಾಕರ್

ಈ ರೀತಿ ಮುಷ್ಕರ ನಡೆಸುವುದು ನಿಯಮಾವಳಿಯಲ್ಲಿ ಇಲ್ಲ. ಸಂಘಕ್ಕೆ ಗೌರವ ಅಧ್ಯಕ್ಷರನ್ನು ನೇಮಿಸಿಕೊಳ್ಳಲು ಅನುಮತಿ ಇಲ್ಲ. ಅದನ್ನು ತಿಳಿಸಿ ಹೇಳಿದರೂ ಅವರು ತಿಳಿದುಕೊಳ್ಳಲು ತಯಾರಿಲ್ಲ. ಸಾರಿಗೆ ಸಂಸ್ಥೆಯ ಕಾರ್ಮಿಕರಿಗೆ ಕಳಂಕ ತರುವ ಕೆಲವನ್ನು ಹೊರಗಿನ ಶಕ್ತಿಗಳು ಮಾಡುತ್ತಿವೆ ಎಂದು ದೂರಿದರು.

ಮುಷ್ಕರದಿಂದ ‍ನಿತ್ಯವೂ 3,800 ರೂ. ಕೋಟಿ ಆದಾಯ ಹಾನಿಯಾಗುತ್ತಿದೆ. ಕಳೆದ ಬಾರಿ ರಾಜ್ಯ ಸರ್ಕಾರ 4 ಸಾವಿರ ಕೋಟಿ ರೂ. ಹಣವನ್ನು ನಿಗಮಕ್ಕೆ ನೀಡಿ, ನೌಕರರ ನೆರವಿಗೆ ಸ್ಪಂದಿಸಿದೆ. ಸದ್ಯದ ಬೇಡಿಕೆಯಾದ ವೇತನ ಪರಿಷ್ಕರಣೆ ಬಗ್ಗೆಯೂ ಮೇ 5ರ ನಂತರ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಸಚಿವರು ಈಗಾಗಲೇ ಹೇಳಿದ್ದಾರೆ. ಆದರೂ, ಸಂಧಾನಕ್ಕೆ ಬಾರದೇ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಅನ್ಯಮಾರ್ಗವಿಲ್ಲದೇ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದರು.

Advertisement

ಶೀಘ್ರ ಪ‍್ರತ್ಯೇಕ ವೆಬ್‌ಸೈಟ್‌: ಕಾರ್ಮಿಕರ ಸೌಲಭ್ಯ ಮತ್ತು ನೋಂದಣಿಗಾಗಿ ಪ್ರತ್ಯೇಕ ವೆಬ್‌ಸೈಟ್‌ ಆರಂಭಿಸಲು ನಿರ್ಧರಿಸಲಾಗಿದೆ. ಇದು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ. ಕಾರ್ಮಿಕರಿಗಾಗಿಯೇ ಪ್ರತ್ಯೇಕ ವೆಬ್‌ಸೈಟ್‌ ಆರಂಭಿಸುತ್ತಿರುವುದು ದೇಶದಲ್ಲೇ ಮೊದಲು ಎಂದು ಸಚಿವ ಹೆಬ್ಬಾರ್ ತಿಳಿಸಿದರು.

ರಾಜ್ಯಾದ್ಯಂತ ಒಟ್ಟು 22 ಲಕ್ಷ ಕಾರ್ಮಿಕರು ಇದ್ದಾರೆ. ಅವರ ನೋಂದಣಿಗೆ ‘ಸೇವಾಸಿಂಧು’ದಲ್ಲಿ ಮಾತ್ರ ಇದುವರೆಗೆ ಅವಕಾಶವಿತ್ತು. ಅಲ್ಲದೇ, ಇತರೆ ಎಲ್ಲರಿಗೂ ಇದು ಒಂದೇ ವೆಬ್‌ಸೈಟ್‌ ಆಗಿದ್ದರಿಂದ ನೋಂದಣಿಗೆ ಸಮಸ್ಯೆ ಆಗುತ್ತಿತ್ತು. ಹೀಗಾಗಿ, ನೂತನ ವೆಬ್‌ಸೈಟ್‌ ಸಿದ್ಧಪಡಿಸಲಾಗುತ್ತಿದೆ ಎಂದು‌ ಮಾಹಿತಿ ನೀಡಿದರು.

ಇದನ್ನೂ ಓದಿ: ಕೆಲಸಕ್ಕೆ ಬಾರದಿದ್ದಲ್ಲಿ ಸಂಬಳ ಕಡಿತ, ಶಿಸ್ತು ಕ್ರಮ: ಸಿಎಂ ಯಡಿಯೂರಪ್ಪ ಎಚ್ಚರಿಕೆ

Advertisement

Udayavani is now on Telegram. Click here to join our channel and stay updated with the latest news.

Next