Advertisement
ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ನದಿಯಲ್ಲಿ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಪರಿಶೀಲಿದ ಸಚಿವರು, ಇದೊಂದು ಅಸಹ್ಯದ ಘಟನೆಯಾಗಿದ್ದು, ಈ ದುರ್ಘಟನೆ ನಡೆಯಬಾರದಿತ್ತು, ಈ ಬಗ್ಗೆ ವಿಷಾದಿಸುವುದಾಗಿ ಹೇಳಿದರು.
Related Articles
Advertisement
ದುರಂತದಲ್ಲಿ ಮೃತರೆಲ್ಲರೂ ಯುವಕರು, ವಿವಾಹಿತರು ಇದ್ದಾರೆ. ಮೃತರ ಕುಟುಂಬದವರೊಂದಿಗೆ ಮಾತನಾಡಿದಾಗ ವಾಸ್ತವಿಕತೆ ಅರ್ಥವಾಗಲಿದೆ. ಬಳಿಕ ಪರಿಹಾರ ನೀಡುವ ಕುರಿತು ಮಾತನಾಡುವುದಾಗಿ ಹೇಳಿದರು.
ಜೂಜು ಆಡಿಸುವಂಥ ಕೃತ್ಯಗಳಿಗೆ ಯಾರೂ ಪ್ರೋತ್ಸಾಹ, ಪ್ರೇರಣೆ ನೀಡಬಾರದು. ಮೇಲ್ನೋಟಕ್ಕೆ ಇಸ್ಪೀಟ್ ಆಡುತ್ತಿದ್ದರು ಎನ್ನುವ ಮಾತುಗಳಿದ್ದರೂ ಜನರ ನೀಡುವ ಮಾಹಿತಿಯೇ ಬೇರೆ ಇದೆ. ಹೀಗಾಗಿ ಸ್ಥಳೀಯರೊಂದಿಗೂ ಕೃತ್ಯದ ಕುರಿತು ಮಾಹಿತಿ ಪಡೆಯುವುದಾಗಿ ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಜೂಜು ಹಾವಳಿ ಹೆಚ್ಚಾಗಿದೆ ಎಂಬ ಆರೋಪವಿದ್ದು, ಜನರು ಸಾಕ್ಷಿ ಸಹಿತ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಇಡೀ ಪ್ರಕರಣದ ಸಮಗ್ರ ತನಿಖೆಗಾಗಿ ಐಜಿಪಿ ಅವರೊಂದಿಗೆ ಮತನಾಡಿದ್ದೇನೆ. ಜೂಜು ಆಡಿಸುವವರು ಎಷ್ಟೇ ಬಲಾದ್ಯರಿದ್ದರೂ ಕ್ರಮ ಕೈಗೊಳ್ಳಬೇಕು ಎಂದರು.
ಬಳಿಕ ಮೃತದೇಹ ಪತ್ತೆಯಾದವರ ಮನೆಗಳಿಗೆ ಭೇಟಿ ನೀಡಿದಾಗ ಕುಟುಂಬದವರು ಜೂಜು ಅಡ್ಡೆಗಳಿಗೆ ಪಿಎಸ್‍ಐ ಸೇರಿ ಪೊಲೀಸರ ಕುಮ್ಮಕ್ಕಿದೆ ಎಂದು ಗಂಭೀರ ಆರೋಪ ಮಾಡಿದರು. ಕುಟುಂಬ ಸದಸ್ಯರು ದೂರು ನೀಡಿದರೆ ಪಿಸ್‍ಐ ವಿರುದ್ಧ ತನಿಖೆ ನಡೆಸುವುದಾಗಿ ಹೇಳಿದರು.
ಬಳಿಕ ಮೃತದೇಹ ಪತ್ತೆಯಾಗಿರುವ ಕುಟುಂಬ ಸದಸ್ಯರಿಗೆ ಸಚಿವ ಶಿವಾನಂದ ಪಾಟೀಲ ವಯಕ್ತಿಕವಾಗಿ ತಲಾ 3 ಲಕ್ಷ ರೂ. ವಿತರಿಸಿ, ಸಾಂತ್ವನ ಹೇಳಿದರು.
ಇದನ್ನೂ ಓದಿ: Hosanagara: ಭೂತನೋಣಿ ಬಳಿ ಧರೆ ಕುಸಿತ… 3 ಗಂಟೆ ರಾಣೇಬೆನ್ನೂರು-ಬೈಂದೂರು ಹೆದ್ದಾರಿ ಬಂದ್