ಹುಬ್ಬಳ್ಳಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಅವರು ಆಪ್ತಮಿತ್ರ ಚಿತ್ರದ ‘ಪಟ ಪಟ ಗಾಳಿಪಟ’ ಹಾಡಿಗೆ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ.
ಇಲ್ಲಿನ ಘಂಟಿಕೇರಿ ಬಾಲಕಿಯರ ಬಾಲ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಮಕ್ಕಳೊಂದಿಗೆ ಹಾಡಿಗೆ ಹೆಜ್ಜೆ ಹಾಕಿದರು. ಸಚಿವರು ಹೆಜ್ಜೆ ಹಾಕುತ್ತಿದ್ದಂತೆ ಅಲ್ಲಿನ ಮಕ್ಕಳು ಹಾಗೂ ಸಿಬ್ಬಂದಿ ಕೂಡ ಸ್ಟೆಪ್ ಹಾಕಿದರು.
ಬಾಲ ಮಂದಿರದ ಮಕ್ಕಳ ಯೋಗ ನೃತ್ಯ, ಏರೋಬಿಕ್ಸ್, ಪೋಪೆಟ್ ಶೋ ನೋಡಿ ಸಂತಸ ಪಟ್ಟ ವ್ಯಕ್ತಪಡಿಸಿದರು. ಬಾಲಮಂದಿರ ಶಿಶುಗೃಹಕ್ಕೆ ಭೇಟಿ ನೀಡಿದ ಅವರು ಮಾತೃ ವಾತ್ಸಲ್ಯದಿಂದ ಮಕ್ಕಳನ್ನು ಎತ್ತಿ ಮುದ್ದಾಡಿದರು.
ಇದನ್ನೂ ಓದಿ:ವಿಜಯನಗರ ಜಿಲ್ಲೆ ಹಿಂದೆ ಸಚಿವರ ರಿಯಲ್ಎಸ್ಟೇಟ್ ಅಭಿವೃದ್ಧಿ ತಂತ್ರ :ಕುಡತಿನಿ ಶ್ರೀನಿವಾಸ್
ಸಚಿವರ ಹುಟ್ಟು ಹಬ್ಬದ ನಿಮಿತ್ತವಾಗಿ ಕೇಕ್ ಕತ್ತರಿಸಿ, ಮಕ್ಕಳಿಗೆ ಹೊಸಬಟ್ಟೆ ಹಾಗೂ ಸಿಹಿ ತಿನಿಸು ವಿತರಿಸಿಲಾಯಿತು. ಇದೇ ಸಂದರ್ಭದಲ್ಲಿ ಇಲಾಖೆಯಿಂದ ಅನಾಥ ಮಕ್ಕಳ ರಕ್ಷಣೆ ಹೊರಡಿಸಲಾದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು. ತಮ್ಮ ಜನ್ಮದಿನದ ಪ್ರಯುಕ್ತ ಉಣಕಲ್ಲ ಮನೋವಿಕಲ ಬಾಲಮಂದಿರದಲ್ಲಿ ಕೈತುತ್ತು, ಸಹ ಭೋಜನ ನೆರವೇರಿಸಿ ಬುಧವಾರ ರಾತ್ರಿ ಬಾಲಮಂದಿರದಲ್ಲಿ ವಾಸ್ತವ್ಯ ಹೂಡಿದ್ದರು.