ಹುಬ್ಬಳ್ಳಿ: ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ ತಕ್ಷಣ ಮಹದಾಯಿ ಕ್ಲಿಯರೆನ್ಸ್ ಮಾಡುತ್ತೇವೆ ಎಂದಿದ್ದರೂ. ಇಲ್ಲಿಯವರೆಗೂ ಅದು ಏಕೆ ಆಗಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹರಿಹಾಯ್ದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿಗೆ ಏಕೆ ಇದುವರೆಗೆ ಕ್ಲಿಯರೆನ್ಸ್ ಕೊಡಲಾಗುತ್ತಿಲ್ಲ ಎಂಬುದರ ಬಗ್ಗೆ ಕೇಂದ್ರವು ರಾಜ್ಯ ಸರ್ಕಾರಕ್ಕೆ ಲಿಖಿತವಾಗಿ ಉತ್ತರ ನೀಡಲಿ. ಪರಿಸರ ಕ್ಲಿಯರೆನ್ಸ್ ನೀಡಲು ಇಷ್ಟು ಮರಗಳನ್ನು ಕಡಿಯಬೇಕಾಗುತ್ತದೆ ಎಂದು ತಿಳಿಸಬೇಕೆಂದು ಕಿಡಿಕಾರಿದರು.
ಕೇಂದ್ರ ಮಂತ್ರಿಗಳು ರಾಜ್ಯಕ್ಕೆ ಬಂದು ಸರ್ಕಾರಕ್ಕೆ ಬಯ್ಯುವುದೊಂದೇ ಕೆಲಸವಾಗಿದೆ. ಕೇಂದ್ರದಲ್ಲಿ ಬಿಜೆಪಿ ಬಂದಾಗಿನಿಂದ ಎಷ್ಟು ಉಗ್ರರ ದಾಳಿಯಾಗಿದೆ. ಅದರ ಬಗ್ಗೆ ಜೋಶಿಯವರು ಮಾತನಾಡುತ್ತಾರಾ? ಈ ಹಿಂದೆ ಕರ್ನಾಟಕ, ಗೋವಾ, ಕೇಂದ್ರ, ಜತೆಗೆ ಮಹಾರಾಷ್ಟ್ರದಲ್ಲಿ ಬಿಜೆಪಿಯವರದೇ ಸರ್ಕಾರಗಳಿದ್ದರೂ, ಅಂದು ಮಹಾದಾಯಿಗೆ ಯಾವುದೇ ಕ್ಲಿಯರೆನ್ಸ್ ಕೊಡಲಿಲ್ಲ. ಇತ್ತೀಚೆಗೆ ಬೇರೆ ರಾಜ್ಯಕ್ಕೆ ಪವರ್ ಲೈನ್ ಹೋಗಲು ಕ್ಲಿಯರೆನ್ಸ್ ನೀಡಿದ್ದಾರೆ. ನಮ್ಮ ರಾಜ್ಯದ ಮಹಾದಾಯಿಗೆ ಕ್ಲಿಯರೆನ್ಸ್ ನೀಡಲು ಮಾತ್ರ ಬಿಜೆಪಿಗೆ ಯಾಕೆ ಆಗುತ್ತಿಲ್ಲ? ಜೋಶಿಯವರು ಮೊದಲು ಇದರ ಬಗ್ಗೆ ಮಾತಾಡಲಿ. ಈಗ ಮಹದಾಯಿ ವಿಚಾರವಾಗಿ ಸರ್ವಪಕ್ಷ ನಿಯೋಗ ಹೋಗುತ್ತಿದೆ. ಈ ಹಿಂದೆ ಇವರು ಐದು ವರ್ಷ ಅಧಿಕಾರದಲ್ಲಿದ್ದಾಗ ಏನು ಮಾಡಿದ್ರು? ರಾತ್ರೋರಾತ್ರೀ ಬಾಕಿಯಿರುವ ಕೆಲಸವನ್ನು ಮೋದಿಯವರು ಕ್ಲಿಯರ್ ಮಾಡ್ತಾರಂತೆ. ಅದೇ ರೀತಿ ಮಹಾದಾಯಿಗೊಂದು ಅನುಮೋದನೆ ನೀಡಲಿ” ಎಂದು ಹೇಳಿದರು.
ಪಡಿತರ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ ಎಂಬ ಬಿಜೆಪಿಗರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೇ ನೀಡಿದ ಅವರು, “ಆಹಾರ ಭದ್ರತೆ ಕಾಯ್ದೆ ತಂದವರು ನಾವು. ಮೋದಿ ಅಕ್ಕಿ ಅಂತಿದ್ದಾರೆ, ಈಗ ಪಡಿತರ ಅಕ್ಕಿ ಕೊಡಲು ಸಿದ್ಧವಾಗಿರುವ ಕೇಂದ್ರ, ಈ ಹಿಂದೆ ಯಾಕೆ ನೀಡಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಈ ಹಿಂದೆ ಯಾಕೆ ಅಕ್ಕಿ ಕೊಡಲಿಲ್ಲ, ಈಗ ಕೊಡುತ್ತೇವೆ ಅಂತಿದ್ದಾರೆ. ಈಗ ಯಾಕೆ ಕೊಡಲು ಒಪ್ಪಿಕೊಂಡರು ಎಂಬುದನ್ನು ಲಿಖಿತವಾಗಿ ಜೋಶಿಯವರು ಉತ್ತರಿಸಲಿ” ಎಂದು ಹೇಳಿದರು.
ಇದನ್ನೂ ಓದಿ: Bandaru: ರಸ್ತೆಯಲ್ಲೇ ಗೂಡ್ಸ್ ವಾಹನ ಪಾರ್ಕಿಂಗ್, ಸಂಚಾರ ಸಂಕಷ್ಟ