Advertisement

ತಾತ್ಕಾಲಿಕ ಶೆಡ್‌ಗಾಗಿ ಸಚಿವರ ಕಾಲಿಗೆ ಬಿದ್ದೆ ಸಂತ್ರಸ್ತೆ

05:57 PM Sep 08, 2019 | Sriram |

ಗದಗ: ತಾತ್ಕಾಲಿಕ ಸೂರು ಕಲ್ಪಿಸುವಂತೆ ಒತ್ತಾಯಿಸಿ ಮಹಿಳೆಯೊಬ್ಬರು ಸಚಿವ ಸಿ.ಸಿ.ಪಾಟೀಲ ಕಾಲಿಗೆರಗಿದ ಘಟನೆ ನರಗುಂದ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ರವಿವಾರ ನಡೆದಿದೆ.

Advertisement

ನರಗುಂದ ತಾಲೂಕಿನ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಗ್ರಾಮಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಸಚಿವ ಸಿ.ಸಿ.ಪಾಟೀಲ್ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಲಕಮಾಪುರ ಗ್ರಾಮಕ್ಕೆ ಆಗಮಿಸಿದ್ದ ಸಚಿವರು, ಟೆಂಟ್‌ಗಳಲ್ಲಿ ವಾಸಮಾಡುತ್ತಿರುವ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಮಹಿಳೆಯೊಬ್ಬರು ಸಚಿವರ ಕಾಲಿಗೆ ಬಿದ್ದು, ನಮಸ್ಕರಿಸಿದರು. ಬಳಿಕ ಸಚಿವರನ್ನು ತಬ್ಬಿಕೊಂಡು, ಹೊಳಿ ಬಂದು ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ. ಮನೆಯಿಲ್ಲದೇ ಟೆಂಟ್ ಕಟ್ಟಿಕೊಂಡು ದಿನ ದೂಡುತ್ತಿದ್ದೇವೆ. ತಾತ್ಕಾಲಿಕ ಶೆಡ್ ಕಲ್ಪಿಸಿಕೊಡಿ. ನಾವು ನಿಮ್ಮನ್ನೇ ನಂಬಿದ್ದೇವೆ. ನಮ್ಮ ಕೈಬಿಡಬೇಡ ಎಂದು ಕಣ್ಣೀರು ಸುರಿಸಿದರು.

ಮಹಿಳೆಯನ್ನು ಸಂತೈಸಿದ ಸಚಿವ ಸಿ.ಸಿ.ಪಾಟೀಲ, ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆ ಇಲ್ಲ. ಎರಡೇ ದಿನಗ ಳಲ್ಲಿ ಶೆಡ್ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next