Advertisement

ಸಚಿವ ಸಾ.ರಾ.ಮಹೇಶ್‌ ದರ್ಪ

01:12 AM Jan 24, 2019 | |

ತುಮಕೂರು: ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ ಹಾಗೂ ಅಂತ್ಯಸಂಸ್ಕಾರದ ವೇಳೆ ನೀಡಿದ ಪೊಲೀಸ್‌ ಬಂದೋಬಸ್ತ್ ಕುರಿತು ಸ್ವತ: ಸಿಎಂ ಕುಮಾರಸ್ವಾಮಿಯವರೇ ಮೆಚ್ಚುಗೆ ವ್ಯಕ್ತಪಡಿಸಿ ಪೊಲೀಸರ ಕಾರ್ಯ ಶ್ಲಾಘಿಸಿದ್ದರು. ಆದರೆ, ಸಮರ್ಥವಾಗಿ ಬಂದೋಬಸ್ತ್ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಐಪಿಎಸ್‌ ಅಧಿಕಾರಿಯ ಮೇಲೆ ಸಚಿವ ಸಾ.ರಾ.ಮಹೇಶ್‌ ನಾಲಿಗೆ ಹರಿ ಬಿಟ್ಟು, ಅವಾಚ್ಯ ಪದಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಮಹಿಳಾ ಅಧಿಕಾರಿ ಸಚಿವರ ಮಾತಿಗೆ ಕಣ್ಣೀರು ಹಾಕಿದ್ದಾರೆ.

Advertisement

ಮಂಗಳವಾರ ನಡೆದ ಶ್ರೀಗಳ ಅಂತ್ಯ ಸಂಸ್ಕಾರದ ವೇಳೆ ಗದ್ದುಗೆ ಬಳಿ ಸೀಮಿತರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿತ್ತು. ಈ ವೇಳೆ ಶ್ರೀಗಳ ಪಾರ್ಥಿವ ಶರೀರ ಕ್ರಿಯಾ ಸಮಾಧಿ ಪ್ರವೇಶಿಸುತ್ತಿದ್ದಂತೆಯೇ ವಿಐಪಿಗಳ ಬರುವಿಕೆ ಹೆಚ್ಚಾಗಿತ್ತು. ಈ ನೂಕು ನುಗ್ಗಲಿನಲ್ಲಿ ಗೊಂದಲ ಉಂಟಾಯಿತು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಚಿವ ಸಾ.ರಾ.ಮಹೇಶ್‌ ಹಾಗೂ ಐಪಿಎಸ್‌ ಅಧಿಕಾರಿ ಡಾ.ದಿವ್ಯಾ ವಿ.ಗೋಪಿನಾಥ್‌ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

ಈ ವೇಳೆ, ಸಚಿವರ ಮಾತಿಗೆ ಡಾ.ದಿವ್ಯಾ ವಿ.ಗೋಪಿನಾಥ್‌ ಕಣ್ಣೀರು ಹಾಕುತ್ತಲೇ ಕರ್ತವ್ಯ ನಿರ್ವಹಿಸಿದರು. ನಂತರ ಈ ವಿಚಾರ ಎಲ್ಲೆಡೆ ಹರಡಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ದಿವ್ಯಾ ವಿ.ಗೋಪಿನಾಥ್‌, ಒಳಗಡೆ 50 ವಿಐಪಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆ ಪಟ್ಟಿಯಲ್ಲಿ ಸಚಿವರಾದ ಸಾ.ರಾ.ಮಹೇಶ್‌ ಅವರ ಹೆಸರು ಇರಲಿಲ್ಲ. ನಂತರ ಅವರು ಸಚಿವರು ಎಂದು ತಿಳಿದ ಮೇಲೆ ಎಲ್ಲಾ  ಸರಿಹೋಯಿತು. ನನ್ನ ಬಗ್ಗೆ ಅವರು ಏನು ಹೇಳಿದರೋ ನನಗೆ ಗೊತ್ತಿಲ್ಲ ಎಂದು ಹೇಳಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಲಯ ಐಜಿಪಿ ಬಿ.ದಯಾನಂದ್‌, ಇಂಥ ದೊಡ್ಡ ಕಾರ್ಯಕ್ರಮದಲ್ಲಿ ಈ ರೀತಿಯ ಘಟನೆ ನಡೆಯುವುದು ಸಾಮಾನ್ಯ. ಈಗ ಎಲ್ಲವೂ ಸರಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next