ಹಾವೇರಿ: ಯಡಿಯೂರಪ್ಪ ಅವರು ಸುಮಾರು 40 ವರ್ಷದ ರಾಜಕಾರಣದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಾವಿರಾರು ಉಳಿಪೆಟ್ಟುಗಳು ಬಿದ್ದಿವೆ. ಈಗ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನೀಡುತ್ತಿದ್ದು, ಕರ್ನಾಟಕದ ರಾಜಾಹುಲಿ ಎಂದೆನಿಸಿಕೊಂಡಿದ್ದಾರೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಹಿರೇಕೆರೂರು ತಾಲೂಕಿನ ಬಸರೀಹಳ್ಳಿ ಹೆಲಿಪ್ಯಾಡ್ ನ್ನು ಸಚಿವರಾದ ಎಸ್.ಟಿ.ಸೋಮಶೇಖರ, ಬಿ.ಸಿ.ಪಾಟೀಲ್ ಉದ್ಘಾಟಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ತಂದೆಯವರಂತೆ ಪುತ್ರ ವಿಜಯೇಂದ್ರ ಅವರಿಗೂ ಸಾಕಷ್ಟು ಉಳಿಪೆಟ್ಟುಗಳು ಬೀಳಲಿದ್ದು, ಸುಂದರ ಮೂರ್ತಿಯಾಗಿ ರೂಪುಗೊಳ್ಳಲಿದ್ದೀರಿ. ಮುಂದೆ ಯಡಿಯೂರಪ್ಪ ಅವರಂತೆ ರಾಜಾಹುಲಿಯಾಗಿ ಹೊರಹೊಮ್ಮಲಿ, ಕರ್ನಾಟಕದಲ್ಲಿ ಸೇವೆ ಮಾಡಲಿ ಎಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾರೈಸಿದ್ದಾಗಿ ಪತ್ರಕರ್ತರ ಪ್ರಶ್ನೆಗೆ ಸಚಿವರಾದ ಸೋಮಶೇಖರ್ ಉತ್ತರಿಸಿದರು.
ಇದನ್ನೂ ಓದಿ:ರಾಜಕೀಯ ಪ್ರೇರಿತ ಮೀಸಲಾತಿಗಳು ಒಳ್ಳೆಯ ಬೆಳವಣಿಗೆಯಲ್ಲ: ಸದಾನಂದ ಗೌಡ
ಬಿಪಿಎಲ್ ಕಾರ್ಡ್ ರದ್ದು ವಿಚಾರದ ಬಗ್ಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡ್ ಹೊಂದಲು ಕೆಲವೊಂದು ನಿಯಮಗಳಿವೆ. ಅದನ್ನು ಉಲ್ಲಂಘಿಸಿದರೆ ಮಾತ್ರ ರದ್ದುಪಡಿಸಿರುವುದಾಗಿ ಸಚಿವರಾದ ಉಮೇಶ್ ಕತ್ತಿಯವರು ಹೇಳಿರಬಹುದು. ಆ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಒಂದು ಬೈಕ್ ಅಥವಾ ಟಿವಿ ಇದ್ದರೆ ರದ್ದು ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಇದ್ದಂತೆ ಕಾಣುತ್ತಿಲ್ಲ. ಕೆಲವೊಂದು ಮನೆಗಳಲ್ಲಿ 3-4 ಬೈಕ್ ಗಳನ್ನು ಇಟ್ಟುಕೊಂಡಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಿಯಮಗಳಿಗನುಸಾರವಾಗಿ ರದ್ದು ಮಾಡುವ ಬಗ್ಗೆ ಸಚಿವರು ಪ್ರಸ್ತಾಪ ಮಾಡಿರಬಹುದು ಎಂದು ಸಚಿವ ಸೋಮಶೇಖರ್ ಹೇಳಿದರು.
ಇದನ್ನೂ ಓದಿ: ಬೀದರ್ ವಾಯು ಸೇನಾ ಕೇಂದ್ರಕ್ಕೆ ಐಎಎಫ್ ಮುಖ್ಯಸ್ಥ ಆರ್.ಡಿ ಮಾಥುರ ಭೇಟಿ
ಪೆಟ್ರೋಲ್ ದರ ಏರಿಕೆ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಲಾಕ್ ಡೌನ್ ಸಂದರ್ಭ ಇದ್ದ ಕಾರಣ, ಈಗ ಕೆಲವೊಂದು ಸೆಸ್ ಗಳನ್ನು ಹಾಕಿದ್ದಾರಷ್ಟೇ. ಪೆಟ್ರೋಲ್ ದರ ಏರಿಳಿತ ಆಗುತ್ತಲೇ ಇರುತ್ತದೆ. ಇದಕ್ಕೆ ಒಮ್ಮೊಮ್ಮೆ ಸಹಕಾರ ಕೊಡಬೇಕಾಗುತ್ತದೆ ಎಂದು ತಿಳಿಸಿದರು.