Advertisement
ಅವನತಿಗೆ ಹಾದಿಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಸಾರ್ವಜನಿಕ ಸಭೆಯಲ್ಲಿ ರಾಜ್ಯ ಸಚಿವ ರೋಷನ್ ಬೇಗ್ ಅವರು ಪ್ರದಾನಿ ನರೇಂದ್ರ ಮೋದಿಯವರ ಕುರಿತು ಕೀಳು ಮಟ್ಟದ ಶಬ್ದವನ್ನು ಪ್ರಯೋಗಿಸಿ ಪಕ್ಷದ ಭಾಷೆ, ಸಂಸ್ಕೃತಿಯನ್ನು ಜಗಜ್ಜಾಹೀರು ಮಾಡಿದ್ದಾರೆ. ಪ್ರಧಾನಿಯವರು ದೇಶದ 125 ಕೋಟಿ ಜನರ ಪ್ರತಿನಿಧಿ ಎಂಬುದನ್ನೂ ಅವರು ಮರೆತಿದ್ದಾರೆ. ಈ ಹಿಂದೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಚಕ್ರವರ್ತಿ ಸೂಲಿಬೆಲೆ ವಿರುದ್ಧವೂ ಇದೇ ರೀತಿ ಕೀಳು ಭಾಷೆ ಪ್ರಯೋಗಿಸಿದ್ದರು. ಇದು ಕಾಂಗ್ರೆಸ್ ಪಕ್ಷದ ಅವನತಿಯ ಸೂಚಕವಾಗಿದೆ. ಇಂಥವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನ ಸಭೆಯ ಬಳಿ ರಾಜ್ಯ ಸಚಿವ ರೋಷನ್ ಬೇಗ್ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ಘೋಷಣೆ ಕೂಗುವ ಮೂಲಕ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ನಗರ ಮಂಡಲದ ಕಾರ್ಯದರ್ಶಿಗಳಾದ ರಾಮದಾಸ್ ಹಾರಾಡಿ, ಗೌರಿ ಬನ್ನೂರು, ಡಿ. ಶಂಭು ಭಟ್, ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ, ಅಶೋಕ್ ಕುಮಾರ್ ಕೋಡಿಂಬಾಡಿ, ಶಿವರಂಜನ್, ವಿಶ್ವನಾಥ ಗೌಡ, ಬೂಡಿಯಾರು ರಾಧಾಕೃಷ್ಣ ರೈ, ಉಷಾ ನಾರಾಯಣ, ಹರಿಣಿ ಪುತ್ತೂರಾಯ, ಮೀನಾಕ್ಷಿ ಮಂಜುನಾಥ, ನಿತೀಶ್ ಕುಮಾರ್ ಶಾಂತಿವನ, ಪುಯಿಲ ಕೇಶವ ಗೌಡ, ಲಕ್ಷ್ಮಣ ಗೌಡ ರಾಜೇಶ್ ಬನ್ನೂರು, ಹರೀಶ್ ಬಿಜತ್ರೆ, ಸುನೀಲ್ ದಡ್ಡು, ಪುರುಷೋತ್ತಮ ಮುಂಗ್ಲಿಮನೆ, ಭರತ್ ಈಶ್ವರಮಂಗಲ, ಯತಿರಾಜ್ ರೈ ನೀರ್ಮಾಡಿ, ಸುರೇಶ್ ಆಳ್ವ, ಸಂದೀಪ್ ಹೊಸಮನೆ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ಅನೀಶ್ ಬಡೆಕ್ಕಿಲ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.