Advertisement

ಕುಡಿಯುವ ನೀರು ಯೋಜನೆಗೆ ಸಚಿವ ರೇವಣ್ಣ ಚಾಲನೆ

07:16 AM Mar 08, 2019 | |

ಹೊಳೆನರಸೀಪುರ: ಗ್ರಾಮೀಣ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ ತಾಲೂಕಿನ ಕಳ್ಳಿಕೊಪ್ಪಲು ಹಾಗೂ ಇತರೆ 10 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ಯೋಜನೆಯನ್ನು ಲೊಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಉದ್ಘಾಟಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರೇವಣ್ಣ , ಈ ಯೋಜನೆಗೆ 2017-18ರಲ್ಲಿ ಅಂದಿನ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಅದರಂತೆ ಇಂದು 7.19 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯಿಂದ ಕಳ್ಳಿಕೊಪ್ಪಲು ಗ್ರಾಮದ ಸುತ್ತಮುತ್ತಲ ಸಂಕನಹಳ್ಳಿ, ದೊಡ್ಡಬ್ಯಾಗತವಳ್ಳಿ ಹಾಗೂ ಪಡುವಲಹಿಪ್ಪೆಯ ಈ ಮೂರು ಗ್ರಾಮ ಪಂಚಾಯಿತಿಗಳ ಸಂಕನಹಳ್ಳಿ, ಕೃಷ್ಣಾಪುರ, ಕೃಷ್ಣಾಪುರಕೊಪ್ಪಲು, ನಾಗಲಾಪುರ ಗ್ರಾಮ, ಚಿಕ್ಕಬ್ಯಾಗತವಳ್ಳಿ, ಶಿವಪುರ, ಕಳ್ಳಿಕೊಪ್ಪಲು ಗ್ರಾಮ, ದೊಡ್ಡಬ್ಯಾಗತವಳ್ಳಿ ಗ್ರಾಮ, ಶೆರಗಾರನಕೊಪ್ಪಲು,

ಅಪ್ಪಗೌಡನಳ್ಳಿ, ಗಂಗೂರುಗ್ರಾಮ, ಜಿ.ಅಂಕನಹಳ್ಳಿ ಹಾಗೂ ಅಂಕವಳ್ಳಿ ಗ್ರಾಮಗಳ ನಿವಾಸಿಗಳಿಗೆ ಇನ್ನು ಮುಂದೆ ಅವರ ಮನೆಗಳಿಗೆ ಹೇಮಾವತಿ ನದಿಯಿಂದ ನೇರವಾಗಿ ನೀರೆತ್ತಿ ಅದನ್ನು ಶುದ್ಧೀಕರಿಸಿ ಅದನ್ನು ನಲ್ಲಿ ಮೂಲಕ ಸರಬರಾಜು ಮಾಡಲಾಗುತ್ತದೆ. ಈ ಮೂರು ಗ್ರಾಮ ಪಂಚಾಯಿತಿಗಳಿಗೆ ಸೇರಿದ 7,476 ಮಂದಿ ನಿವಾಸಿಗಳು ಇದ್ದು ತಲಾ 85 ಲೀಟರ್‌ ನಂತೆ ಪ್ರತಿನಿತ್ಯ 6035 ಲಕ್ಷ ಲೀ. ನೀರನ್ನು ಅಯಾ ಮನೆಗಳಿಗೆ ಸರಬರಾಜು ಮಾಡಲಾಗುವುದೆಂದರು.

ಈ ಕಾಮಗಾರಿಯನ್ನು ಕೇವಲ 11 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿದ್ದು ಶುದ್ದಿಕರಣ ಘಟಕವನ್ನು ಕಳ್ಳಿಕೊಪ್ಪಲು ಬಡಾವಣೆ ನಂದಿಕಲ್ಲು ಬಾರೆ ಗ್ರಾಮದ ಬಳಿ ನಿರ್ಮಿಸಿಲಾಗಿದೆ ಎಂದರು. ಇದೇ ರೀತಿ ತಾಲೂಕಿನ ಮತ್ತಷ್ಟು ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ಯೋಜನೆಯನ್ನು ವಿಸ್ತರಿಸಲಾಗಿದ್ದು ಅವುಗಳ ಕಾಮಗಾರಿ ಭರದಿಂದ ಸಾಗಿದೆ, ಅವುಗಳು ಸಹ ಸದ್ಯದಲ್ಲೇ ಉದ್ಘಾಟನೆಯಾಗಲಿದ್ದು, ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನಿಯರ್‌, ಪ್ರಭು, ಪ್ರಶಾಂತ್‌, ಜೆಡಿಎಸ್‌ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಟಿಎಪಿಎಂಎಸ್‌ ಅಧ್ಯಕ್ಷ ಎಚ್‌.ಎನ್‌.ದೇವೇಗೌಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next