Advertisement

Minister RB Timmapur ರಾಜ್ಯ ಸರ್ಕಾರ ರೈತರ ಪರವಾಗಿ ಕಾರ್ಯ ಮಾಡುತ್ತಿದೆ

05:58 PM Jun 28, 2024 | Team Udayavani |

ರಬಕವಿ-ಬನಹಟ್ಟಿ: ರಾಜ್ಯ ಸರ್ಕಾರ ರೈತರ ಪರವಾಗಿ ಉತ್ತಮವಾದ ಕಾರ್ಯವನ್ನು ಮಾಡುತ್ತಿದೆ. ಏತ ನೀರಾವರಿ ಕೇಂದ್ರಗಳಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ಇಂಥ ನಾಲ್ಕಾರು ಯೋಜನೆಗಳು ಇವೆ. ಅವುಗಳನ್ನು ಆದಷ್ಟು ಬೇಗನೆ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದರು.

Advertisement

ಶುಕ್ರವಾರ ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿರುವ ವೆಂಕಟೇಶ್ವರ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ವಿಧಾನ ಪರಿಷತ್ ಸದಸ್ಯೆ ಉಮಾಶ್ರೀಯವರ ದೂರದೃಷ್ಠಿಯಿಂದಾಗಿ ಈ ಯೋಜನೆ ಜಾರಿಗೆ ಬಂದಿದೆ. ಅವರ ನಂತರ ಬಂದವರೂ ಮತ್ತು ಈ ಭಾಗದ ರೈತರು ಬಹಳಷ್ಟು ಹೋರಾಟ ಮಾಡಿ ಯೋಜನೆ ಆರಂಭಿಸುವಲ್ಲಿ ಶ್ರಮಿಸಿದ್ದಾರೆ.

ಜಮಖಂಡಿ, ರಬಕವಿ ಬನಹಟ್ಟಿ ಹಾಗೂ ಮುಧೋಳ ತಾಲ್ಲೂಕಿನ ಒಟ್ಟು14 ಗ್ರಾಮಗಳ, 1200 ಹೆಕ್ಟರ್ ಎಕರೆ ಭೂಮಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಒಟ್ಟು ರೂ.54 ಕೋಟಿ ವೆಚ್ಚದ ಕಾಮಗಾರಿ ಇದಾಗಿದೆ. ಇನ್ನೂ ಸ್ವಲ್ಪ ಕಾರ್ಯಗಳು ಬಾಕಿ ಉಳಿದಿವೆ. ಅವುಗಳನ್ನು ಶೀಘ್ರವಾಗಿ ಕೈಗೊಂಡು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ತಿಮ್ಮಾಪುರ ತಿಳಿಸಿದರು.

ಜಮಖಂಡಿ ಶಾಸಕ ಜಗದೀಶ ಗುಡಗುಂಟಿಮಠ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾವಿತ್ರಿ ಪೂಜಾರಿ, ರೈತ ಹಾಗೂ ಕಾಂಗ್ರೆಸ್ ಮುಖಂಡ ಸಂಗಪ್ಪ ಉಪ್ಪಲದಿನ್ನಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದ್ದು ಕೊಣ್ಣೂರ, ಡಾ.ಎ.ಆರ್. ಬೆಳಗಲಿ, ಡಾ.ಪದ್ಮಜೀತ ನಾಡಗೌಡ ಪಾಟೀಲ, ಭೀಮಶಿ ಮಗದುಮ್, ರಾಯಪ್ಪ ಪೂಜಾರಿ, ಬಸವರಾಜ ದೊಡ್ಡಮನಿ, ತುಕಾರಾಮ ಬನ್ನೂರ, ಮಹಾಲಿಂಗ ನಾವಿ, ಶೇಖರ ಹಕ್ಕಲದಡ್ಡಿ, ಅಡವಯ್ಯ ವಿಭೂತಿ, ಶಿವಪ್ಪ ದ್ಯಾಮನ್ನವರ, ಮಾರುತಿ ಹೊರಟ್ಟಿ, ಬೀರಪ್ಪ ಹೊಸೂರ, ರಮೇಶ ಕಾಸರ, ಸುರೇಶ ಪೂಜಾರಿ, ವಿಠ್ಠಲ ಜಾಧವ, ಗೋವಿಂದ ನಾಯಕ, ಕಲ್ಲಪ್ಪ ಹನಗಂಡಿ ಸೇರಿದಂತೆ ಅನೇಕರು ಇದ್ದರು.

Advertisement

ಸ್ವಾಮೀಜಿ ಹೇಳಿಕೆ ಗೊತ್ತಿಲ್ಲ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಿ ಎಂದು ಸ್ವಾಮೀಜಿಗಳು ಹೇಳಿದ ಮಾತಿಗೆ ಪ್ರತಿಕ್ರಿಯೆ ನೀಡಿದ ಸಚಿವರು ಮುಖ್ಯಮಂತ್ರಿಯ ಸ್ಥಾನ ಆಯ್ಕೆ ಪ್ರಜಾಪ್ರಭುತ್ವದ ರೀತಿಯಲ್ಲಿ ನಡೆಯುತ್ತಿದೆ. ಮುಖ್ಯಮಂತ್ರಿಯನ್ನು ಸ್ವಾಮೀಜಿಗಳು ಆಯ್ಕೆ ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಈಗಾಗಲೇ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಮುಖ್ಯಮಂತ್ರಿ ಆಯ್ಕೆ ವಿಚಾರ ಹೈಕಮಾಂಡಗೆ ಬಿಟ್ಟದ್ದು ಎಂದರು.

ರಾಜ್ಯದಲ್ಲಿ ಮೂರು ಡಿಸಿಎಂ ಸ್ಥಾನಗಳ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು ನೀವು ಸಿ.ಎಂ. ಸ್ಥಾನ ಕೊಟ್ಟರೆ ಬಿಡ್ತಿರಾ ಎಂದು ಹಾಸ್ಯವಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next