ರಾಮನಗರ: ಎಂಇಎಸ್ ನವರು ಹಿಂದೆ ನಾಲ್ಕೈದು ಜನ ಗೆಲ್ಲೋರು. ಈಗ ನಗರ ಪಾಲಿಕೆಯಲ್ಲೂ ಅವರು ಗೆಲ್ಲುತ್ತಿಲ್ಲ, ಎಲ್ಲಾ ಕಡೆ ಸೋಲುತ್ತಾರೆ. ಅವರ ಮೀಸಲಾತಿ ವಿಚಾರಕ್ಕೆ ಹೋರಾಟ ಮಾಡುತ್ತಿದ್ದಾರೆ. ಕೆಲವೆಡೆ ಬಸ್ ಸುಟ್ಟಿದ್ದಾರೆ. ಬಸ್ ಸುಡೋದಕ್ಕೂ, ಮೀಸಲಾತಿಗೂ ಯಾವುದೇ ಸಂಬಂಧ ಇಲ್ಲ, ಅವರು ಮೀಸಲಾತಿಗೆ ಹೋರಾಟ ಮಾಡಿಕೊಳ್ಳಲಿ. ಆದ್ರೆ ಈ ರೀತಿಯ ಉದ್ದಟತನ ಸರಿಯಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಈ ಬಗ್ಗೆ ನಮ್ಮ ಮುಖ್ಯ ಕಾರ್ಯದರ್ಶಿ ಗೆ ಪತ್ರ ಬರೆಯಲು ಹೇಳಿದ್ದೀನಿ. ಮಹಾರಾಷ್ಟ್ರ ಮುಖ್ಯಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆಯಲಿದ್ದಾರೆ. ಯಾರು ಬಸ್ ಸುಟ್ಟಿದ್ದಾರೆ ಅವರ ವಿರುದ್ಧ ಕ್ರಮಕ್ಕೆ ಹೇಳಿದ್ದೇನೆ. ಅವರು ಬಸ್ಸುಗಳೂ ಕೂಡಾ ನಮ್ಮ ಕಡೆ ಬರುತ್ತಲ್ಲ..! ನಮ್ಮವರು ಏನಾದ್ರೂ ಮಾಡುತ್ತಾರಾ.? ನಮಗೂ ಮಹಾರಾಷ್ಟ್ರಕ್ಕೂ ಗಲಾಟೆ ಏನಾದ್ರೂ ಇದೇಯಾ.? ಮೀಸಲಾತಿ ಹೋರಾಟ ಅವರ ಆಂತರಿಕ ವಿಚಾರ. ಆದ್ರೆ ನಮ್ಮ ಬಸ್ಸುಗಳಿಗೆ ಹಾನಿ ಮಾಡುತ್ತಿರುವುದು ತಪ್ಪು. ಯಾರೋ ಕಿಡಗೇಡಿಗಳು ಇದನ್ನು ಮಾಡಿದ್ದಾರೆ ಎಂದು ಹೇಳಿದರು.
ಪ್ರತ್ಯೇಕ ರಾಜ್ಯದ ಬಗ್ಗೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರತ್ಯೇಕ ರಾಜ್ಯ ಅನ್ನೋದು ಮುಗಿದ ಕಥೆ. ಕನ್ನಡ ಮಾತನಾಡುವ ಭಾಷಿಗರೆಲ್ಲಾ ಒಂದೇ. ಈಗಾಗಲೇ 67 ವರ್ಷ ಮುಗಿದಿದೆ, ಯಾರು ಹೋರಾಟ ಮಾಡಿದ್ದಾರೆ ಅವರಿಗೆ ಧನ್ಯವಾದ ಹೇಳಿದ್ದೇನೆ ಎಂದರು.
ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಎಂಬ ಡಿಕೆಶಿ ಭಾವನಾತ್ಮಕ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು,ಈ ಬಗ್ಗೆ ಡಿಸಿಎಂ ಅವರ ಬಳಿ ಕೇಳಿ.ನನಗೆ ಅವರು ಮಾತನಾಡಿರುವುದು ಗೊತ್ತಿಲ್ಲ ಎಂದರು.
ಮಾಜಿ ಸಿಎಂ ಹೆಚ್‌ಡಿಕೆ, ಮಾಜಿ ಸಚಿವ ಸಿಪಿವೈ ದುಬೈ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ನಾನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ತೆರಳಿದ್ದಾರೆ ಅಷ್ಟೇ ಎಂದರು.