Advertisement

ಅಧಿಕಾರಿಗಳೇ ನಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ

04:30 PM Feb 25, 2021 | Team Udayavani |

ರಾಣಿಬೆನ್ನೂರ: ವಿವಿಧ ಅಭಿವೃದ್ಧಿ ಕಾಮಗಾರಿಗೆ ತಾಲೂಕು ಮಟ್ಟದ ಅನೇಕ ಅಧಿ ಕಾರಿಗಳು ನನಗೆ  ರಿಯಾದ ಮಾಹಿತಿ ನೀಡುತ್ತಿಲ್ಲ. ಈ ಬಗ್ಗೆ ಶಾಸಕರನ್ನು ಕೇಳಿದರೆ ಅಧಿ ಕಾರಿಗಳ ಮೇಲೆ ಹೇಳುತ್ತಾರೆ. ಅ ಧಿಕಾರಿಗಳೇ ನಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ನಾನು ಮತ್ತು ಸ್ಥಳೀಯ ಶಾಸಕರು ಅಭಿವೃದ್ಧಿಗೆ ಕೈಜೋಡಿಸಿದ್ದು ಅಧಿ ಕಾರಿಗಳು ಸ್ಪಂದಿಸಬೇಕು ಎಂದು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ಸಚಿವ ಆರ್‌. ಶಂಕರ ಹೇಳಿದರು.

Advertisement

ಸ್ಥಳೀಯ ಪರಿವೀಕ್ಷಣ ಮಂದಿರದಲ್ಲಿ ಏರ್ಪಡಿಸಿದ್ದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಧಿಕಾರಿಗಳು ಮತ್ತೆ ಹೀಗೆ ಯಡವಟ್ಟು ಮಾಡಿದರೆ ಪರಿಣಾಮ ಸರಿ ಇರದು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ರಾಣಿಬೆನ್ನೂರ ತೊರೆಯುತ್ತೇನೆ ಎಂದು ನನ್ನ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು, ಕ್ಷೇತ್ರದ ಅಭಿವೃದ್ಧಿ ನನ್ನ ಗುರಿಯಾಗಿದ್ದು, ನಾನೆಲ್ಲೂ ಹೋಗಲ್ಲ, ಅದಕ್ಕಾಗಿ ಸ್ವಂತ ಮನೆ ಮಾಡಿರುವೆ. ಇಲ್ಲೇ ಇರುವೆ ಎಂದರು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಓಸಿ, ಇಸ್ಪೀಟ್‌, ಅಕ್ರಮ ಮರಳು ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳು ದಿನ ದಿನಕ್ಕೂ ಹೆಚ್ಚುತ್ತಿದ್ದು, ಇವುಗಳಿಗೆ ಕೂಡಲೇ ಹಿರಿಯ ಪೊಲೀಸ್‌ ಅಧಿ ಕಾರಿಗಳು, ಸಂಬಂಧಿಸಿದ ಅ ಧಿಕಾರಿಗಳು ಕಡಿವಾಣ ಹಾಕಬೇಕು. ಬಹಳ ದಿನಗಳಿಂದ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ನಾಗರೀಕರಿಂದ ದೂರುಗಳು ನಿರಂತರವಾಗಿ ಬರುತ್ತಿವೆ. ಈ ಬಗ್ಗೆ ಎಚ್ಚರವಹಿಸಬೇಕು ಎಂದು ಪೊಲೀಸ್‌ ಇಲಾಖೆಗೆ ಸೂಚಿಸಿದರು.

ಮಾವು ಮತ್ತು ರೇಷ್ಮೆ ಬೆಳೆಗಾರರಿಗೆ ಹೊಸ ತಳಿಗಳ ಬಗ್ಗೆ ಮಾಹಿತಿ ತಿಳಿಸಲು ರೈತರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 715 ಕೃಷಿ ಕೇಂದ್ರಗಳಿಗೆ ವೆಬ್‌ಸೈಟ್‌ ಮೂಲಕ ಮಾಹಿತಿ ನೀಡಲಾಗುತ್ತಿದೆ. ರೇಷ್ಮೆ ಗೂಡು ನಿರ್ಮಾಣ ಮಾಡುವ ಪ್ರೋತ್ಸಾಹಧನದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next