Advertisement

ಅಗತ್ಯ ಇರುವ ಕಡೆ ಉಪ ನೋಂದಣಾಧಿಕಾರಿ ಕಚೇರಿ: ಅಶೋಕ್‌

10:42 PM Mar 14, 2022 | Team Udayavani |

ವಿಧಾನಸಭೆ:ರಾಜ್ಯದಲ್ಲಿ ಅಗತ್ಯ ಇರುವ ಕಡೆ ಉಪನೋಂದಣಾಧಿಕಾರಿ ಕಚೇರಿ ಸ್ಥಾಪಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ವೇಳೆ ಜೆಡಿಎಸ್‌ನ ಮಂಜುನಾಥ್‌ ಅವರು ಬಿಡದಿ ಹಾಗೂ ಕುದೂರಿನಲ್ಲಿ ಉಪ ನೋಂದಣಿ ಕಚೇರಿ ಪ್ರಾರಂಭಿಸುವ ಬಗ್ಗೆ ಮನವಿ ಮಾಡಿದಾಗ ಉತ್ತರಿಸಿದ ಅವರು, ರಾಜ್ಯದಲ್ಲಿ ಅಗತ್ಯ ಇರುವ ಕಡೆ ಉಪನೋಂದಣಿ ಕಚೇರಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಒತ್ತಡ ಕಡಿಮೆ ಜತೆಗೆ ಸರ್ಕಾರಕ್ಕೂ ಆದಾಯ ಬರುತ್ತದೆ ಎಂದು ಹೇಳಿದರು.

ಪಕ್ಷೇತರ ಸದಸ್ಯ ಶರತ್‌ಬಚ್ಚೇಗೌಡ, ಸರ್ವರ್‌ ಸಮಸ್ಯೆಯಿಂದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಮಸ್ಯೆಯಾಗುತ್ತಿದ್ದು ಸರಿಪಡಿಸುವಂತೆ ಒತ್ತಾಯಿಸಿರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

ಅನಿಲ್‌ಚಿಕ್ಕಮಾದು ಅವರ ಮತ್ತೂಂದು ಪ್ರಶ್ನೆಗೆ ನಾಡಕಚೇರಿ ದುರಸ್ಥಿಗೆ ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿಯ ಕುಮಾರ್‌ ಬಂಗಾರಪ್ಪ ಅವರ ನಾಡಕಚೇರಿಗೆ ಪ್ರತ್ಯೇಕವಾಗಿ ವಿಶೇಷ ವಿನ್ಯಾಸ ರೂಪಿಸಿ ಎಂಬ ಸಲಹೆಗೂ ಪರಿಶೀಲಿಸುವುದಾಗಿ ತಿಳಿಸಿದರು.

Advertisement

ಜಾತಿ ಹೆಸರಿನ ಗ್ರಾಮ ಬೇಡ
ಗ್ರಾಮಗಳಿಗೆ ಜಾತಿಯ ಹೆಸರು ಇದ್ದರೆ ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಅಶೋಕ್‌ ತಿಳಿಸಿದರು.

ಕಾಂಗ್ರೆಸ್‌ನ ರಮೇಶ್‌ಕುಮಾರ್‌ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಹೊಸದಾಗಿ ಕಂದಾಯ ಗ್ರಾಮಗಳಾಗುವ ತಾಂಡಾ, ಹಟ್ಟಿ, ಕಾಲೋನಿಗಳು ಕೆಲವು ಜಾತಿಗಳ ಹೆಸರು ಹೊಂದಿದ್ದು ಬದಲಾಯಿಸಲಾಗುವುದು ಎಂದು ಹೇಳಿದರು.

ಈ ಹಿಂದೆ ಸ್ಮಶಾನಗಳಿಗೂ ಜಾತಿಯ ಹೆಸರು ಇತ್ತು. ಇದೀಗ ಹೆಸರು ತೆಗೆದುಹಾಕಲಾಗಿದೆ. ಯಾವುದೇ ಜಾತಿಯ ಹೆಸರಿನ ಸ್ಮಶಾನ ಇರಬಾರದು. ಕೇವಲ ಸ್ಮಶಾನ ಎಂದು ಮಾತ್ರ ಕರೆಯಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next