ಬೆಂಗಳೂರು: ಕಾಂಗ್ರೆಸ್ ನಾಯಕರು ಸಂಪತ್ ರಾಜ್ ಪರವೋ, ಅಖಂಡ ಶ್ರೀನಿವಾಸ್ ಮೂರ್ತಿ ಪರವೋ ಎಂದು ಹೇಳಬೇಕು ಎಂದು ಸಚಿವ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಶಾಸಕನ ಮನೆ ಮೇಲೆ ದಾಳಿ ಆಗಿ ಕೊಲೆ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಘಟನೆಗೆ ಕಾರಣರಾದವರನ್ನು ಬಂಧಿಸಿ ಎಂದು ಸಿದ್ದರಾಮಯ್ಯವರಾಗಲಿ ,ಕಾಂಗ್ರೆಸ್ ನ ಇತರ ನಾಯಕರಾಗಲಿ ಪ್ರತಿಭಟನೆ ಮಾಡಿಲ್ಲ. ದಲಿತರ ಮೇಲೆ ಕಾಂಗ್ರೆಸ್ ಗೆ ಬರೋದು ಮೊಸಳೆ ಕಣ್ಣೀರು ಎನ್ನೋದು ಸಾಬೀತಾಗಿದೆ ಎಂದರು.
ಕಾಂಗ್ರೆಸ್ ನಾಯಕರು ನನಗೆ ಬೆಂಬಲ ನೀಡಿ, ನ್ಯಾಯ ಕೊಡಿ ಎಂದು ಅಖಂಡ ಶ್ರೀನಿವಾಸ್ ಮೂರ್ತಿ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದರೂ ಕಾಂಗ್ರೆಸ್ ಸಹಾಯ ಮಾಡಲಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಸಂಪತ್ ಓಡಿ ಹೋಗಿದ್ದಾರೆ ಎಂದು ಹೇಗೆ ಹೇಳ್ತೀರಾ? ಅವರ ಆರೋಗ್ಯ ಸರಿಯಿರಲಿಲ್ಲ: ಡಿಕೆಶಿ
ಕೇಂದ್ರದಿಂದ ನೆರೆ ಪರಿಹಾರ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರ ಸದ್ಯ 577 ಕೋಟಿ ರೂ ಪರಿಹಾರ ಕೊಟ್ಟಿದೆ. ಕೇಂದ್ರ ಮತ್ತೊಂದು ಕಂತಿನ ಪರಿಹಾರ ಕೊಡಲಿದೆ. ಮತ್ತಷ್ಟು ಪರಿಹಾರಕ್ಕೆ ಮನವಿ ಮಾಡುತ್ತೇವೆ. ಸರ್ಕಾರದ ಬಳಿ ನೆರೆ ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ ಎಂದು ಹೇಳಿದರು.