Advertisement
ಬೇಕಾಬಿಟ್ಟಿ ಕೆಲಸ ಮಾಡಿದರೆ ಹೇಗೆ? ಇನ್ಮುಂದೆ ಕೆಲಸದಲ್ಲಿ ಸುಧಾರಣೆ ಆಗದಿದ್ದರೆ ಶಿಸ್ತು ಕ್ರಮಕ್ಕೆ ದಿಟ್ಟ ಹೆಜ್ಜೆ ಇಡಬೇಕಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಹಾಗೂ ಸಮಪರ್ಕಕ ನೀರು ವಿತರಣೆ ಮಾಡದಿರುವುದಕ್ಕೆ ನೀರು ಸರಬರಾಜು ಮಂಡಳಿ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಆದ್ದರಿಂದ ಅವರು ಆರೋಗ್ಯ ರಕ್ಷಣೆಗೆ ಹೆಚ್ಚಿನ ಗಮನ ಹರಿಸಬೇಕು. ಮಹಾನಗರ ಪಾಲಿಕೆಯಿಂದ ಒದಗಿಸಿರುವ ಮಾಸ್ಕ್, ಕೈಚೀಲಗಳು, ಬೂಟುಗಳು ಹಾಗೂ ಕಸಬಾರಿಗೆಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.
Related Articles
ಬಾಡಿಗೆ ಕಟ್ಟಡದಲ್ಲಿರುವ ಈ ವಸತಿನಿಲಯವನ್ನು ಆದಷ್ಟು ಬೇಗ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಸ್ವಂತ ಕಟ್ಟಡ ಲಭ್ಯವಿಲ್ಲದಿದ್ದಲ್ಲಿ ವಸತಿ ನಿಲಯಕ್ಕೆ ಸ್ಥಳಗುರುತಿಸಬೇಕು. ಸಮಾಜ ಕಲ್ಯಾಣ ಇಲಾಖೆಯಿಂದ ಮಾದರಿ ವಸತಿ ನಿಲಯಗಳನ್ನು ನಿರ್ಮಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ವಸತಿ ನಿಲಯ ನಿರ್ಮಿಸಿಕೊಳ್ಳಬೇಕು. ವಸತಿ ನಿಲಯದಲ್ಲಿರುವ ನೀರಿನ ಸಮಸ್ಯೆ ನಿವಾರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು ವಸತಿ ನಿಲಯದಲ್ಲಿ ವಾಶಿಸುವ ವಿದ್ಯಾರ್ಥಿಗಳು ವಸತಿ ನಿಲಯವನ್ನು ತಮ್ಮ ಮನೆಯಂತೆ ಭಾವಿಸಿ ನೈರ್ಮಲ್ಯ ಕಾಪಾಡಬೇಕು ಎಂದರು.
Advertisement
ನಗರದ ಹಳೆಯ ಜೇವರ್ಗಿ ರಸ್ತೆಯ ಪಿ ಆ್ಯಂಡ್ ಟಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕಾಂಪ್ಲೆಕ್ಸ್‌ಗೆ ಭೇಟಿ ನೀಡಿ ಸಮಾಜಕಲ್ಯಾಣ ಇಲಾಖೆಯಿಂದ ಐ.ಎ.ಎಸ್., ಐ.ಪಿ.ಎಸ್., ಕೆ.ಎ.ಎಸ್., ಬ್ಯಾಂಕಿಂಗ್‌ಗಳಂಥಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಗುರುತಿಸಿರುವ ಕೇಂದ್ರ ಪರಿಶೀಲಿಸಿ, ಈ ಸ್ಥಳದಲ್ಲಿ ತಾತ್ಕಾಲಿಕವಾಗಿ ತರಬೇತಿ ಕೇಂದ್ರ ಪ್ರಾರಂಭಿಸಬೇಕು. ಶಾಶ್ವತವಾಗಿ ತರಬೇತಿ ಕೇಂದ್ರ ನಿರ್ಮಿಸಲು ನಗರದಲ್ಲಿ ನಿವೇಶನ ಗುರುತಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆ ಸದಸ್ಯರಾದ ರಾಜಕುಮಾರ ಕಪನೂರ, ರಾಜು ಜಾನಿ, ಗಣ್ಯರಾದ ಗಣೇಶ ವಳಕೇರಿ, ಸಲೀಂ, ಮದರ ಖಾನ್, ಶಿವಕುಮಾರ ಬಾಳಿ, ಸಮಾಜಕಲ್ಯಾಣ ಇಲಾಖೆ ಜಂಟೀ ನಿರ್ದೇಶಕ ಸತೀಶ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಮಹೆಬೂಬ ಕಾರಟಗಿ, ಪಾಲಿಕೆ ಪರಿಸರ ಅಧಿಕಾರಿ ಮುನಾಫ್ ಪಟೇಲ್ ಹಾಗೂ ಮತ್ತಿತರರು ಹಾಜರಿದ್ದರು. ಕಲಬುರಗಿ ಉಸ್ತುವಾರಿ ಸಚಿವರಾದನಂತರ ಪ್ರಥಮ ಬಾರಿಗೆ ನಗರ ಪ್ರದಕ್ಷಿಣೆ ಕೈಗೊಂಡು ಸಮಸ್ಯೆಗಳನ್ನು ಪರಿಶೀಲಿಸಿದ್ದೇನೆ. ನಗರದಲ್ಲಿ ಹಲವು ವೃತ್ತಗಳಿಗೆ ಮೊದಲಿನಿಂದಲೂ ಸಾಂಪ್ರದಾಯಿಕ ಹೆಸರುಗಳು ರೂಢಿಯಲ್ಲಿವೆ. ಅನ ಧಿಕೃತವಾಗಿ ನಾಮಫಲಕಗಳನ್ನು ಅಳವಡಿಸಿದ್ದರೆ ಕ್ರಮ ಕೈಗೊಳ್ಳಲಾಗುವುದು.
ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ